ಕಡೂರು: (ನ್ಯೂಸ್ ಮಲ್ನಾಡ್ ವರದಿ) ಅನ್ನಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು 5ಕೆಜಿ ಅಕ್ಕಿ ಬದಲಿಗೆ ಹಣ ಕೊಡುತ್ತಿದ್ದುದನ್ನು ನಿಲ್ಲಿಸಿ ಫೆಬ್ರವರಿ ತಿಂಗಳಿಂದ ಅಕ್ಕಿಯನ್ನೇ ಕೊಡುತ್ತಿದೆ. ಆದರೆ, ಸರ್ಕಾರ ಕೊಟ್ಟರೂ ನ್ಯಾಯ ಬೆಲೆ ಅಂಗಡಿಯ ಮಾಲೀಕ ಮಾತ್ರ ಬಡವರ ಅಕ್ಕಿಗೆ ಕನ್ನ ಹಾಕಿರುವ ಘಟನೆಯೊಂದು ವರದಿಯಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕನಿಗೆ ಸ್ಥಳೀಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಮನೆಗೆ ಜೈವಿಕ ಅನಿಲ ಘಟಕ ಸೇರಿದಂತೆ ಸಬ್ಸಿಡಿ; ಯಾರಿಗೆ ಸಬ್ಸಿಡಿ? ಎಷ್ಟು ಸಹಾಯಧನ?

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿ. ಮಲ್ಲೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರದಿಂದ ತಲಾ 15 ಕೆಜಿ ಅಕ್ಕಿ ನೀಡಲು ಕೊಟ್ಟಿದ್ದರೂ ಕೂಡ 75 ಕೆಜಿ ಅಕ್ಕಿ ಕೊಡುವಲ್ಲಿ 60 ಕೆಜಿ ಅಕ್ಕಿ ನೀಡಿದ್ದಾನೆ. ಆದರೆ ಕಾರ್ಡ್ ನಲ್ಲಿ ಮಾತ್ರ 75 ಕೇಜಿ ಅಂತ ಎಂಟ್ರಿ ಮಾಡಿದ್ದಾನೆ.
ಇದನ್ನೂ ಓದಿ: ಟೆಸ್ಲಾ ಪ್ರಿಯರಿಗೆ ಬಂಪರ್ ಸುದ್ದಿ; ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು, ಮಾರಾಟ ಯಾವಾಗ?
ಕಡಿಮೆ ಪ್ರಮಾಣದಲ್ಲಿ ಅಕ್ಕಿ ವಿತರಣೆ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯ ಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












