ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಆನ್ ಲೈನ್ ಸ್ಕ್ಯಾನ್ ಮಾಡುವ ಮೂಲಕ ಹಣ ಕೊಡುವುದಾಗಿ ನಂಬಿಸಿ 5,000 ವಂಚಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ; Bigg Boss Kannada:ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್!

ತೀರ್ಥಹಳ್ಳಿ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ಇರುವ ಮೊಬೈಲ್ ಅಂಗಡಿಯೊಂದಕ್ಕೆ ತಿಪ್ಪೇಸ್ವಾಮಿ ಎಂದು ಹೆಸರು ಹೇಳಿ ಅನಾಮಿಕ ವ್ಯಕ್ತಿ ಹಣ ಬೇಕು ಗೂಗಲ್ ಪೇ ಮಾಡುತ್ತೇನೆ ಎಂದು ಹಣವನ್ನ ಪಡೆದು ಮೊಬೈಲ್ ಮೂಲಕ ಅಕೌಂಟ್ ಯುಪಿಐ ಸ್ಕ್ಯಾನ್ ಮಾಡಿದ್ದಾನೆ. ಹಣ ಟ್ರಾನ್ಸ್ಫರ್ ಎಂದು ಡಿಸ್ಪ್ಲೇಯಲ್ಲಿ ಬಂದಿದ್ದನ್ನು ತೋರಿಸಿ ಮಾಹಿತಿಯನ್ನು ನೀಡಿದ್ದಾನೆ. ಆದರೆ, ಹಣವನ್ನ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡದೆ ಡಿಜಿಟಲ್ ಮೋಸವನ್ನು ಮಾಡಿದ್ದಾನೆ.

ಇದನ್ನೂ ಓದಿ; ಮುಡಾ ಕೇಸ್: ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಜಾ
ಇತ್ತೀಚಿಗೆ ಡಿಜಿಟಲ್ ಮೋಸಗಳು ಹೆಚ್ಚಾಗುತ್ತಿದ್ದು, ತೀವ್ರ ಗಮನವಹಿಸಿ ಎಂದು ಪೊಲೀಸರು ಎಷ್ಟೇ ತಿಳಿಸಿದರು ಸಹ ಜನ ಅದರ ಬಗ್ಗೆ ಎಚ್ಚೆತ್ತಿಲ್ಲ. ಡಿಜಿಟಲ್ ವ್ಯವಹಾರದ ಬಗ್ಗೆ ಆದಷ್ಟು ಜನರು ಗಮನ ಹರಿಸಬೇಕಾಗಿದೆ.
ಇದನ್ನೂ ಓದಿ; ರಾಜ್ಯದಲ್ಲಿ ಒನ್ ನೇಷನ್ ಒನ್ ಕಾರ್ಡ್ ಯೋಜನೆ ಜಾರಿ; ಏನಿದು? ಇಲ್ಲಿದೆ ನೋಡಿ













