ಶೃಂಗೇರಿ/ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ವೆರಿಕೋಸ್ ವೇನ್ಸ್ ಖಾಯಿಲೆಗೆ ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೆ ಆಯುರ್ವೇದದ ಮುಖಾಂತರ ರೋಗವನ್ನು ಕಡಿಮೆ ಮಾಡುವ ಖ್ಯಾತ ಆಯುರ್ವೇದ ವೆರಿಕೋಸ್ ತಜ್ಞ ಡಾ. ಎಂ. ವಿ ಉರಾಳ್ ಅವರಿಗೆ ಆಯುಷ್ ಟಿವಿ ನ್ಯಾಷನಲ್ ಹೆಲ್ತ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ; Bigg Boss Kannada:ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್!

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೃಂಗೇರಿಯ ಖ್ಯಾತ ಆಯುರ್ವೇದ ವೆರಿಕೋಸ್ ತಜ್ಞ ಡಾ. ಎಂ. ವಿ ಉರಾಳ್ ಅವರಿಗೆ ಆಯುಷ್ ಟಿವಿ ನ್ಯಾಶನಲ್ ಹೆಲ್ತ್ ಅವಾರ್ಡ್ ಗೆ ಭಾಜನರಾಗಿದ್ದಾರೆ. ಡಾ. ಎಂ. ವಿ ಉರಾಳ್ ವೆರಿಕೋಸ್ ವೇಯ್ನ್ ರೋಗಕ್ಕೆ ಸೂಕ್ತವಾದ ಔಷಧಿ ಇಲ್ಲದಿರುವುದನ್ನು ಮನಗಂಡು ತಮ್ಮದೇ ಪರಿಕಲ್ಪನೆಯಿಂದ ಸಂಶೋಧನಾ ಸಂಸ್ಥೆಗಳ ಸಹಯೋಗ ಹಾಗೂ ಸತತ 5 ವರ್ಷಗಳ ಕಾಲ ಕ್ಲಿನಿಕಲ್ ಸಂಯೋಜನೆಯೊಂದಿಗೆ ಶಸ್ತ್ರ ಚಿಕಿತ್ಸೆಯಿಲ್ಲದೇ ವೆರಿಕೋಸ್ ವೇಯ್ನ್ ಕಡಿಮೆ ಮಾಡುವಂತಹ ಒಂದು ಕ್ರಾಂತಿಕಾರಿ ಆಯುರ್ವೇದ ಔಷಧಿಯನ್ನು ಆವಿಷ್ಕಾರ ಮಾಡಿದರು.


ಇದನ್ನೂ ಓದಿ; ಮುಡಾ ಕೇಸ್: ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಜಾ
ಈ ಹಿಂದೆ ಕೂಡ ಡಾ. ಉರಾಳ್ ಅವರಿಗೆ ಕರ್ನಾಟಕ ಹೆಲ್ತ್ ಕೇರ್ ಆಯುಷ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು. ಇದೀಗ ಆಯುಷ್ ಟಿವಿ ನ್ಯಾಷನಲ್ ಹೆಲ್ತ್ ಅವಾರ್ಡ್ ಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ; ರಾಜ್ಯದಲ್ಲಿ ಒನ್ ನೇಷನ್ ಒನ್ ಕಾರ್ಡ್ ಯೋಜನೆ ಜಾರಿ; ಏನಿದು? ಇಲ್ಲಿದೆ ನೋಡಿ













