ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಂಡಿ ಚಿಪ್ಪು ಬದಲಾವಣೆ ಆಪರೇಷನ್ ಮಾಡಲಾಯಿತು.
ಇದನ್ನೂ ಓದಿ; Bigg Boss Kannada:ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್!

ಕಡಿಮೆ ದರದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ:
ಮಂಡಿ ಚಿಪ್ಪು ಸವೆತವು ವಯಸ್ಸು ಆದ ಹಾಗೆ ಸವೆತಗೊಳ್ಳುತ್ತದೆ. ಅಲ್ಲದೆ ಕ್ಯಾಲ್ಸಿಯಂ ಮಾತ್ರೆ, ಪೈನ್ ಕ್ಯೂಲರ್ ಮಾತ್ರೆ ಸೇವನೆಗಳಿಂದ ಈ ಮಂಡಿ ಚಿಪ್ಪು ಸವೆತ ಉಂಟಾಗುತ್ತದೆ. ಈ ಶಸ್ತ್ರ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ 4 ರಿಂದ 5 ದಿನಗಳವರೆಗೆ ಇರಬೇಕಾಗುತ್ತದೆ. ಶಸ್ತ್ರ ಚಿಕಿತ್ಸೆ ಆದ ಮರುದಿನವೇ ವ್ಯಕ್ತಿ ಓಡಾಡಬಹುದಾಗಿದೆ.

ಹಾಗೆಯೇ ಈ ಶಸ್ತ್ರ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಲ್ಲಿ 2.5 ಲಕ್ಷವಾದರೆ ಶ್ರೀ ಅಭಿನವ ವಿದ್ಯಾ ತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೇವಲ 1.15 ಲಕ್ಷದಿಂದ 1.30 ಲಕ್ಷದ ಒಳಗೆ ಚಿಕಿತ್ಸೆ ನೀಡಲಾಗುತ್ತದೆ. ಬಡವರು, ಮಧ್ಯಮ ವರ್ಗದವರಿಗೆ ಇದು ವರದಾನವಾಗಿದೆ.
ಇದನ್ನೂ ಓದಿ; ಮುಡಾ ಕೇಸ್: ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಜಾ
ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈಗಾಗಲೇ 3 ಮಂಡಿ ಚಿಪ್ಪು ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿರುವ ನುರಿತ ವೈದ್ಯರಾದ ಅತಿಥಿ ವಿಜಯ್ ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ; ರಾಜ್ಯದಲ್ಲಿ ಒನ್ ನೇಷನ್ ಒನ್ ಕಾರ್ಡ್ ಯೋಜನೆ ಜಾರಿ; ಏನಿದು? ಇಲ್ಲಿದೆ ನೋಡಿ













