ಚಿಕ್ಕಮಗಳೂರು ಘಟ್ಟ ಪ್ರದೇಶದಲ್ಲಿ ದಟ್ಟ ಮಂಜು

ಚಿಕ್ಕಮಗಳೂರು: (ನ್ಯೂಸ್‌ ಮಲ್ನಾಡ್‌ ವರದಿ) ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ದಟ್ಟ ಮಂಜು ಆವರಿಸಿಕೊಂಡಿದ್ದು, ಶೀತಗಾಳಿಯೊಂದಿಗೆ ಮೈಕೊರೆಯುವ ತಂಪಿನ ವಾತಾವರಣ ನಿರ್ಮಾಣವಾಗಿದೆ. ಈ ಆಹ್ಲಾದಕರ ವಾತಾವರಣವು ಪ್ರವಾಸಿಗರನ್ನು ಸೆಳೆಯುತ್ತಿದ್ದರೆ, ಮತ್ತೊಂದೆಡೆ ಸ್ಥಳೀಯರು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿದೆ.


ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ


ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿ, ಕುದುರೆಮುಖ, ಎತ್ತಿನ ಭುಜ ಸೇರಿದಂತೆ ಜಿಲ್ಲೆಯ ಬಹುತೇಕ ಘಟ್ಟ ಪ್ರದೇಶಗಳಲ್ಲಿ ಬೆಳಗ್ಗಿನ ಸಮಯದಲ್ಲಿ ದಟ್ಟ ಮಂಜು ಆವರಿಸಿರುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವೆಡೆ ಪರಸ್ಪರ ಒಬ್ಬರನ್ನೊಬ್ಬರು ಕಾಣದಷ್ಟು ಮಂಜು ಆವರಿಸಿಕೊಂಡಿದ್ದು, ಮಂಜಿನ ನರ್ತನ ಪ್ರವಾಸಿಗರಲ್ಲಿ ರೋಮಾಂಚನ ಮೂಡಿಸಿದೆ.

ದೂರದೂರುಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರು ಮಂಜಿನಿಂದಾಗಿ ಹಸಿರು ನಿಸರ್ಗದ ಸೌಂದರ್ಯವನ್ನು ಸಂಪೂರ್ಣವಾಗಿ ಸವಿಯಲು ಸಾಧ್ಯವಾಗದಿದ್ದರೂ, ಮಂಜು ಕವಿದ ಪರ್ವತಶ್ರೇಣಿಗಳು, ತಣ್ಣನೆಯ ಗಾಳಿ ಹಾಗೂ ಶಾಂತ ವಾತಾವರಣ ಪ್ರವಾಸಿಗರನ್ನು ಪುಳಕಗೊಳಿಸಿದೆ.


ಇದನ್ನೂ ಓದಿ: ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ


ಇನ್ನೊಂದೆಡೆ, ಕಡಿದಾದ ಕಣಿವೆಯ ಹಾದಿಗಳು ಹಾಗೂ ತಿರುವು ತಿರುವಿನ ರಸ್ತೆಗಳಲ್ಲಿ ಮಂಜಿನಿಂದಾಗಿ ವಾಹನಗಳನ್ನು ಚಾಲನೆ ಮಾಡಲು ಚಾಲಕರು ಪರದಾಡುವಂತಾಗಿದೆ. ಗೋಚರತೆ ಕಡಿಮೆಯಾಗಿರುವುದರಿಂದ ಅಪಘಾತದ ಆತಂಕವೂ ಹೆಚ್ಚಾಗಿದೆ. ಘಟ್ಟ ಪ್ರದೇಶಗಳಷ್ಟೇ ಅಲ್ಲದೆ ಸಮತಟ್ಟಾದ ಪ್ರದೇಶಗಳಲ್ಲಿಯೂ ಮಂಜು ಕವಿದ ವಾತಾವರಣ ಕಂಡುಬರುತ್ತಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.