ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಡಿಕೆ ವ್ಯಾಪಾರಕ್ಕಾಗಿ ಹೆಚ್ಚಿನ ಟೆಂಡರ್ ದಾರಗಳನ್ನು ಹಾಗೂ ಕಛೇರಿಗೆ ಲಿಫ್ಟ್ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಶೃಂಗೇರಿ ವತಿಯಿಂದ ಮ್ಯಾಮ್ ಕೋಸ್ ಹಾಲೇ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆ; ಪ್ರತಿ ತಿಂಗಳು ಸಿಗಲಿದೆ 5,000 ರೂ. ಪಿಂಚಣಿ

ಮನವಿ ಪತ್ರದಲ್ಲಿ ಏನಿದೆ?:
ಶೃಂಗೇರಿ ಮ್ಯಾಮ್ ಕೋಸ್ ಶಾಖೆಯಲ್ಲಿ ರೈತರು ವ್ಯಾಪಾರಕ್ಕಾಗಿ ಅಡಿಕೆ ದಾಸ್ತಾನಿರಿಸಿದ್ದು, ಈ ಅಡಿಕೆ ವ್ಯಾಪಾರಕ್ಕೆ ಟೆಂಡರ್ ಕರೆಯುವ ಸಂದರ್ಭದಲ್ಲಿ ಉತ್ತಮವಾದ ಧಾರಣೆ ನಿಗಧಿಪಡಿಸದೇ ಕಡಿಮೆ ಮೊತ್ತದ ಧಾರಣೆಯನ್ನು ಅಡಿಕೆಗೆ ನೀಡುತ್ತಿದ್ದು, ಅತೀ ತುರ್ತಾಗಿ ಹಣದ ಅವಶ್ಯಕತೆ ಇರುವ ರೈತರು ಅನಿವಾರ್ಯವಾಗಿ ಕಡಿಮೆ ಧಾರಣೆಗೆ ಅಡಿಕೆಯನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ತೀವ್ರವಾದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದುದರಿಂದ ಮ್ಯಾಮ್ ಕೋಸ್ ಶೃಂಗೇರಿಯಿಂದ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿ ಮತ್ತು ಹೆಚ್ಚಿನ ಟೆಂಡರ್ ದಾರರನ್ನು ಕರೆದು ಉತ್ತಮ ಧಾರಣೆಗೆ ಅಡಿಕೆಗೆ ನೀಡಬೇಕೆಂದು ಆಗ್ರಹಿಸುತ್ತೇವೆ.
ಇದನ್ನೂ ಓದಿ: £2,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?
ಅಲ್ಲದೇ ಶೃಂಗೇರಿ ಶಾಖೆಯ ಕಛೇರಿಯು 3ನೇ ಮಹಡಿಯಲ್ಲಿದ್ದು ವಯಸ್ಸಾದ ಮತ್ತು ಅನಾರೋಗ್ಯಪೀಡಿತ ರೈತರಿಗೆ ಕಛೇರಿಗೆ ಬಂದು ವ್ಯವಹರಿಸಲು ತೊಂದರೆ ಉಂಟಾಗುತ್ತಿರುವುದರಿಂದ ಕೂಡಲೇ ಕಛೇರಿಗೆ ಲಿಫ್ಟ್ ವ್ಯವಸ್ಥೆಯನ್ನು ಮಾಡಬೇಕು. ಈ ಬೇಡಿಕೆ ಈಡೇರಿಸದಿದ್ದಲ್ಲಿ ಕಛೇರಿ ಎದುರು ಧರಣಿ ಸತ್ಯಾಗ್ರಹ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: £19,800 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ












