ಶೃಂಗೇರಿ/ಹೆಬ್ರಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ನೆಲ್ಲಿಕಟ್ಟೆ ಕ್ರಾಸ್ನಲ್ಲಿ ಸೀತಾನದಿ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ವೈದ್ಯ ಸೇರಿದಂತೆ ಇಬ್ಬರು ಮುಳುಗಿ ಮೃತಪಟ್ಟ ಘಟನೆ ನಿನ್ನೆ (ಭಾನುವಾರ) ಸಂಜೆ ಸಂಭವಿಸಿದೆ.

ಶಿವಮೊಗ್ಗ ಮೂಲದ, ಶೃಂಗೇರಿಯ ಧನ್ವಂತರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ದೀಪಕ್(34) ಹಾಗೂ ಶಿವಮೊಗ್ಗದ ಉದ್ಯಮಿ ಸಿನು ಡ್ಯಾನಿಯಲ್ ಮೃತರು.
ಇದನ್ನೂ ಓದಿ; ಸ್ವಂತ ಉದ್ಯೋಗ ಮಾಡುವ ಆಸಕ್ತಿ ಇದೆಯಾ?; ಸರ್ಕಾರವೇ ನೀಡುತ್ತೆ ನಿಮಗೆ ಸಹಾಯಧನ; ಇಲ್ಲಿದೆ ನೋಡಿ ಅರ್ಜಿ ಸಲ್ಲಿಕೆಯ ಮಾಹಿತಿ
ಡಾ. ದೀಪಕ್, ಸಿನು ಡ್ಯಾನಿಯಲ್ ಹಾಗೂ ಡಾ. ವಿನ್ಸೆಂಟ್ ಮೋಹನ್ ಮೂವರು ಆಪ್ತರಾಗಿದ್ದರು. ನಿನ್ನೆ ಒಟ್ಟಿಗೆ ಹೆಬ್ರಿಯಲ್ಲಿ ಊಟ ಮಾಡಿದ್ದಾರೆ. ಬಳಿಕ ಸೋಮೇಶ್ವರ ಕಡೆ ಹೋಗುವಾಗ ಸೀತಾನದಿಯಲ್ಲಿ ಸ್ನಾನಕ್ಕಿಳಿದ್ದಾರೆ. ಸಿನು ಡ್ಯಾನಿಯಲ್ ಸ್ನಾನ ಮಾಡುತ್ತಾ ಮುಂದೆ ಹೋಗಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಡಾ. ದೀಪಕ್ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದಾಗಿದ್ದು ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.
ಡಾ. ವಿನ್ಸೆಂಟ್ ಸ್ನೇಹಿತರನ್ನು ರಕ್ಷಿಸಲು ನದಿಗೆ ಧುಮುಕಿದರೂ ಈಜು ಬಾರದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅಲ್ಲಿದ್ದ ಮರದ ಬೇರೊಂದನ್ನು ಹಿಡಿದು ಮೇಲೆ ಬಂದಿದ್ದಾರೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೃಂಗೇರಿ: ಸಾಲ ಮರುಪಾವತಿ ಮಾಡುವಂತೆ ನಿಂದಿಸಿ ಹಲ್ಲೆ ಆರೋಪ; ಮಹಿಳೆ ಆತ್ಮಹತ್ಯೆ
ಇದನ್ನೂ ಓದಿ; ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; ಈ ದಿನ ಬರಲಿದೆ 16 ಕಂತಿನ ಹಣ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಾಲ ವಸೂಲಾತಿಗೆ ಬಂದ ವೇಳೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಹನುಮಂತನಗರ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಪಿತಾ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಇದನ್ನೂ ಓದಿ; ನರೇಗಾ ಕಾರ್ಮಿಕರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್
ಕಳೆದ ಆರೇಳು ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ ಅರ್ಪಿತಾ 1 ಲಕ್ಷ ಸಾಲ ಪಡೆದಿದ್ದರು. ಇಂದು ಸಾಲದ ವಿಚಾರವಾಗಿ ಆಕೆಯ ಮನೆಗೆ ಸಂಘದವರು ತೆರಳಿದ್ದಾರೆ. ಈ ವೇಳೆ ಅರ್ಪಿತಾ ಹಾಗೂ ಸಂಘದವರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಾಲ ಕಟ್ಟಲು ಆಗದಿದ್ದರೆ ಎಲ್ಲಾದ್ರೂ ಹೋಗಿ ಸಾಯಿ ಎಂದು ಗಲಾಟೆ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಯಿಂದ ಮನನೊಂದ ಅರ್ಪಿತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅರ್ಪಿತಾಗೆ 5 ವರ್ಷದ ಹಿಂದೆ ಹನುಮಂತಪ್ಪನ ಜೊತೆ ವಿವಾಹವಾಗಿದ್ದು, ಮೂರುವರೆ ವರ್ಷದ ಮಗನಿದ್ದಾನೆ. ಇಂದು ಮನೆಯಲ್ಲಿ ತಾಯಿ ಹಾಗೂ ಮಗ ನಾಗಾರ್ಜುನ್ ಮಾತ್ರ ಇದ್ದರು.
ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯಬೇಕಿದೆ.












