ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾರಣಕ್ಕೆಂದು ಬಂದ ಮೂವರು ಯುವಕರಲ್ಲಿ ಓರ್ವ ಯುವಕ ನಾಪತ್ತೆಯಾಗಿದ್ದು, ಇದೀಗ 700 ಅಡಿ ದಟ್ಟಾರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ.

ಏನಿದು ಘಟನೆ:
ಚಿಕ್ಕಮಗಳೂರು ಜಿಲ್ಲೆಯ ಬಾಳೂರು ಠಾಣಾ ವ್ಯಾಪ್ತಿಯ ಬಲ್ಲಾಳ ರಾಯ ದುರ್ಗ ಹಾಗೂ ಭಂಡಾಜೆ ಫಾಲ್ಸ್ ಗೆ ಭಾನುವಾರ ಮುಂಜಾನೆ ಯುವಕರ ತಂಡವೊಂದು ನೋಡಲು ಹೊರಟಿತ್ತು. ಹಿಂತಿರುಗುವ ವೇಳೆ ತಂಡದಲ್ಲಿ ಓರ್ವನಾದ ಧನುಷ್ ಎಂಬಾತ ನಾಪತ್ತೆಯಾಗಿದ್ದ. ಇದರಿಂದ ಗಾಬರಿಗೊಂಡ ಜೊತೆಗಿದ್ದ ಯುವಕರು ಆತನ ಮೊಬೈಲ್ ಗೆ ಕರೆ ಮಾಡಿದರೆ ನೆಟ್ ವರ್ಕ್ ಇರಲಿಲ್ಲ ಕೂಡಲೇ ಯುವಕರು ನಡೆದುಕೊಂಡು ಸುಂಕಸಾಲೆ ಗ್ರಾಮಕ್ಕೆ ಬಂದು ಅಲ್ಲಿಂದ ಆತನ ಮೊಬೈಲ್ ಗೆ ಕರೆ ಮಾಡಿದರೆ. ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಬಳಿಕ 112 ಗೆ ಕರೆ ಮಾಡಿ ಯುವಕ ನಾಪತ್ತೆಯಾಗಿರುವ ವಿಚಾರ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ; ಸ್ವಂತ ಉದ್ಯೋಗ ಮಾಡುವ ಆಸಕ್ತಿ ಇದೆಯಾ?; ಸರ್ಕಾರವೇ ನೀಡುತ್ತೆ ನಿಮಗೆ ಸಹಾಯಧನ; ಇಲ್ಲಿದೆ ನೋಡಿ ಅರ್ಜಿ ಸಲ್ಲಿಕೆಯ ಮಾಹಿತಿ
ಮಾಹಿತಿ ಪಡೆದುಕೊಂಡ ಪೊಲೀಸರು ಧನುಷ್ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಮೂರೂ ಗಂಟೆ ಕಾರ್ಯಾಚರಣೆ ಬಳಿಕ 700 ಅಡಿ ಕೆಳಗೆ ದಟ್ಟವಾದ ಅರಣ್ಯ ಪ್ರದೇಶದ ಮದ್ಯದಲ್ಲಿ ಒಬ್ಬನೇ ನಿಂತಿರುವುದು ಕಂಡು ಬಂದಿದೆ. ಬಳಿಕ ಯುವಕನನ್ನು ಕೊಟ್ಟಿಗೆಹಾರಕ್ಕೆ ಕರೆ ತಂದು ಪೋಷಕರಿಗೆ ಕರೆ ಮಾಡಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ.
ಚಾರಣಕ್ಕೆ ನಿಷೇಧವಿದ್ದರೂ ಅನುಮತಿ ಕೊಡಲು ಕಾರಣವೇನು?:
ಹೊಸ ಪ್ರಮಾಣಿತ ಕಾರ್ಯ ವಿಧಾನ ಜಾರಿಯಾಗುವವರೆಗೂ ಚಾರಣಕ್ಕೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಜನವರಿ 26 ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಮಾಧ್ಯಮಗಳಲ್ಲೂ ವರದಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಚಾರಣ ತಾಣಗಳಲ್ಲೂ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮತ್ತು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯ ವಿಧಾನ ರೂಪಿಸುವವರೆಗೆ ಆನ್ ಲೈನ್ ಬುಕ್ಕಿಂಗ್ ಇಲ್ಲದ ಎಲ್ಲ ಚಾರಣ ತಾಣಗಳಲ್ಲಿ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸಲಾಗಿದೆ ಎಂದು ಕಳೆದ ತಿಂಗಳು ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ, ಯುವಕರಿಗೆ ಚಾರಣಕ್ಕೆ ಅವಕಾಶ ಏಕೆ ನೀಡಲಾಯಿತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಶೃಂಗೇರಿ/ಹೆಬ್ರಿ: ನೀರಿನಲ್ಲಿ ಮುಳುಗಿ ಶೃಂಗೇರಿಯ ಖಾಸಗಿ ಆಸ್ಪತ್ರೆ ವೈದ್ಯ ಸೇರಿ ಇಬ್ಬರು ಸಾವು
ಶೃಂಗೇರಿ/ಹೆಬ್ರಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ನೆಲ್ಲಿಕಟ್ಟೆ ಕ್ರಾಸ್ನಲ್ಲಿ ಸೀತಾನದಿ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ವೈದ್ಯ ಸೇರಿದಂತೆ ಇಬ್ಬರು ಮುಳುಗಿ ಮೃತಪಟ್ಟ ಘಟನೆ ನಿನ್ನೆ (ಭಾನುವಾರ) ಸಂಜೆ ಸಂಭವಿಸಿದೆ.
ಶಿವಮೊಗ್ಗ ಮೂಲದ, ಶೃಂಗೇರಿಯ ಧನ್ವಂತರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ದೀಪಕ್(34) ಹಾಗೂ ಶಿವಮೊಗ್ಗದ ಉದ್ಯಮಿ ಸಿನು ಡ್ಯಾನಿಯಲ್ ಮೃತರು.
ಡಾ. ದೀಪಕ್, ಸಿನು ಡ್ಯಾನಿಯಲ್ ಹಾಗೂ ಡಾ. ವಿನ್ಸೆಂಟ್ ಮೋಹನ್ ಮೂವರು ಆಪ್ತರಾಗಿದ್ದರು. ನಿನ್ನೆ ಒಟ್ಟಿಗೆ ಹೆಬ್ರಿಯಲ್ಲಿ ಊಟ ಮಾಡಿದ್ದಾರೆ. ಬಳಿಕ ಸೋಮೇಶ್ವರ ಕಡೆ ಹೋಗುವಾಗ ಸೀತಾನದಿಯಲ್ಲಿ ಸ್ನಾನಕ್ಕಿಳಿದ್ದಾರೆ. ಸಿನು ಡ್ಯಾನಿಯಲ್ ಸ್ನಾನ ಮಾಡುತ್ತಾ ಮುಂದೆ ಹೋಗಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಡಾ. ದೀಪಕ್ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದಾಗಿದ್ದು ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.
ಡಾ. ವಿನ್ಸೆಂಟ್ ಸ್ನೇಹಿತರನ್ನು ರಕ್ಷಿಸಲು ನದಿಗೆ ಧುಮುಕಿದರೂ ಈಜು ಬಾರದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅಲ್ಲಿದ್ದ ಮರದ ಬೇರೊಂದನ್ನು ಹಿಡಿದು ಮೇಲೆ ಬಂದಿದ್ದಾರೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












