
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಗುಡ್ಡಟ್ಟಿ ಗ್ರಾಮದ ಸರ್ವೆ ನಂಬರ್ 254 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯ ನಡುತೋಪಿನಲ್ಲಿ ಅಕ್ರಮ ಮರ ಕಡಿತ ನಡೆದಿದೆ. ಸ್ಥಳೀಯರ ಪ್ರಕಾರ ಬೆಲೆಬಾಳುವ ಅಕೇಶಿಯ ಮರಗಳನ್ನು ಕಡಿದು ಗುಪ್ತವಾಗಿ ಸಾಗಾಣಿಕೆ ಮಾಡಲಾಗಿದೆ.
ಇದನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 10th, PUC ವಿದ್ಯಾರ್ಹತೆ

ಸ್ಥಳೀಯರು ಈ ಕುರಿತಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಗಳನ್ನು ವಶಪಡಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಆದರೆ, ಈ ಅಕ್ರಮದಲ್ಲಿ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳೇ ಶಾಮೀಲು ಆಗಿರುವ ಶಂಕೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: 3 ತಿಂಗಳ ಗೃಹಲಕ್ಷ್ಮಿ ಹಣ ಯಜಮಾನಿಯರ ಖಾತೆಗೆ ಜಮೆ
ಸ್ಥಳೀಯರ ಒತ್ತಾಯದ ಮೇರೆಗೆ ಘಟನೆಗೆ ಸಂಬಂಧಿಸಿದಂತೆ ತನಿಖೆ ಗಂಭೀರವಾಗಿ ಕೈಗೊಳ್ಳಬೇಕು. ಅರಣ್ಯ ಸಂಪತ್ತನ್ನು ಕಾಪಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ತೆರಿಗೆಯಲ್ಲಿ ರಿಯಾಯಿತಿ
ADVERTISEMENT: ಟ್ರಿಲಿಯಂಟ್ ಡಿಜಿಟಲ್ ವಾಕ್-ಇನ್ ಸಂದರ್ಶನ (JOB OFFER)
ದಿನಾಂಕ: 17 ಮೇ 2025
ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00 ರವರೆಗೆ
ಸ್ಥಳ: ಟ್ರಿಲಿಯಂಟ್ ಡಿಜಿಟಲ್ ಪ್ರೈವೆಟ್ ಲಿಮಿಟೆಡ್, ನಂ. 4, ಶಾರದಾ ನಗರ, ಮಾಮ್‌ಕೋಸ್ ಕಟ್ಟಡದ ಬಳಿ, ಶೃಂಗೇರಿ
ಯಾರು ಭಾಗವಹಿಸಬಹುದು?
BCA / BE / / BSc / MBA ಪದವಿಧರರು
ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಇರುವವರು
ಇದು ನಿಮ್ಮ ಮೊದಲ ಹೆಜ್ಜೆ ಆಗಬಹುದು ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾದ ವೃತ್ತಿಗೆ!
ನಿಮ್ಮ ಸ್ವವಿರಗಳನ್ನು ಈ ವಾಟ್ಸಾಪ್ ನಂಬರ್ 8277093259 ಅಥವಾ hr@trilliantdigital.com ಗೆ ಕಳಿಸಬಹುದು













