ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದಂತ ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಂತ ಪ್ರಸೂತಿ ತಜ್ಞ ಡಾ. ಬಾಲಕೃಷ್ಣ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದೆ.
ಇದನ್ನೂ ಓದಿ: 9ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ 2,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ

ಏನಿದು ಪ್ರಕರಣ:
ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವಾಗ ಡಾ|| ಜಿ.ಎಸ್.ಬಾಲಕೃಷ್ಣ 14.03.2020 ರಂದು ಹೆರಿಗೆ ಮಾಡಿಸಿ ಜನಿಸಿದ ಹೆಣ್ಣು ಮಗುವನ್ನು 50,000 ಗಳಿಗೆ ಮಾರಾಟ ಮಾಡಿ ಮಾಡಿದ್ದರು ಎಂಬ ಆರೋಪ ಇವರ ಮೇಲಿತ್ತು. ಇದೀಗ ಈ ಆರೋಪ ಸಾಬೀತಾಗಿರುವುದರಿಂದ ಸರ್ಕಾರಿ ಸೇವೆಯಿಂದ ವಜಾಗೊಳಿಸಿದೆ.
ಇದನ್ನೂ ಓದಿ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಇ-ಸ್ವತ್ತು ಕಡ್ಡಾಯ; ಇಲ್ಲಿದೆ ಸಂಪೂರ್ಣ ಮಾಹಿತಿ












