ಕಳಸ; (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಲ್ಲಿ ಮುಂದುವರಿದ ಭಾರೀ ಗಾಳಿ ಮಳೆ ಅಬ್ಬರಕ್ಕೆ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ.


ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ

ಕಳಸ-ಕುದುರೆಮುಖ-ಕಾರ್ಕಳ ಮಾರ್ಗದ ರಾಜ್ಯ ಹೆದ್ದಾರಿ ಸೇತುವೆ ಪಕ್ಕದಲ್ಲೇ ಭೂಕುಸಿತ ಉಂಟಾಗಿದ್ದು, ಭಾರೀ ವಾಹನಗಳು ಓಡಾಡಿದ್ರೆ ರಸ್ತೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.


ಇದನ್ನೂ ಓದಿ: 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್

ಮಲೆನಾಡು ಭಾಗದಲ್ಲಿ ನಿರಂತರ ಸುರಿದ ಮಳೆಗೆ ಎರಡು ದಿನದ ಹಿಂದೆ ಸ್ವಲ್ಪ ಕುಸಿದಿದ್ದ ಭೂಮಿ ಇಂದು ಮತ್ತಷ್ಟು ಕುಸಿತವಾಗಿದೆ. ಹೀಗೆ ಮಳೆ ಮುಂದುವರಿದರೆ ಮತ್ತಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದ್ದು, ಕಳಸ ಟು ಕಾರ್ಕಳ ರಸ್ತೆ ಸಂಪೂರ್ಣ ಬಂದ್ ಆಗಲಿದೆ.


ಇದನ್ನೂ ಓದಿ: ಈ ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಜಾಬ್ ಆಫರ್; ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ
ಇನ್ನು ಭೂಮಿ ಕುಸಿದಿದ್ದ ಸ್ಥಳದಲ್ಲಿ ರೆಡ್ ಟೇಪ್ ಕಟ್ಟಿ, ಮರಳು ಚೀಲವನ್ನು ಪೊಲೀಸರು, ಅಧಿಕಾರಿಗಳು ಅಡ್ಡ ಇಡಾಗಿದೆ.
ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆಯಲ್ಲಿ ರಸ್ತೆ ಕುಸಿತವಾಗಿದ್ದು, ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
















