ಚಿಕ್ಕಮಗಳೂರು: BSNL ಟವರ್ʼಗಳ ಬ್ಯಾಟರಿ ಜೋಡಣೆಯ ಬೇಡಿಕೆ ಪೂರೈಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ BSNL ಟವರ್ʼನ ಬ್ಯಾಟರಿ ಮತ್ತು ಜನರೇಟರ್ ಸಮಸ್ಯೆಗಳಿಂದ ನೆಟ್ವರ್ಕ್ ಕೊರತೆ ಇದ್ದ ಕಾರಣ ಕೇಂದ್ರ ದೂರ ಸಂಪರ್ಕ ಇಲಾಖೆಯ ಸಹಕಾರದಿಂದ ಹೊಸದಾಗಿ 51 ಬ್ಯಾಟರಿ ಮಂಜೂರಾಗಿದ್ದು, ಹೆಚ್ಚುವರಿ 43 ಬ್ಯಾಟರಿ ಮಂಜೂರಾತಿ ಹಂತದಲ್ಲಿದೆ. ಇದರಿಂದ ಎಲ್ಲಾ ಟವರ್‌ʼಗಳಿಗೂ ಬ್ಯಾಟರಿ ಜೋಡಣೆಯ ಬೇಡಿಕೆ ಪೂರೈಕೆ ಆಗಲಿದೆ.


ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


ಹೊಸದಾಗಿ 28 ಟವರ್ ಗಳು ಮಂಜೂರಾತಿ ಆಗಿದ್ದು, ಈ ಪೈಕಿ 18 ಸ್ಥಳಗಳಲ್ಲಿ ಟವರ್ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿದಲ್ಲಿದೆ. 10 ಸ್ಥಳಗಳಲ್ಲಿ 4ಜಿ ಸೇವೆ ಆರಂಭ ಮಾಡಲಾಗಿದೆ.

ಹೊಸ ಟವರ್ ನಿಂದ 4ಜಿ ಸೇವೆ ಆರಂಭ:
ಚಿಕ್ಕಮಗಳೂರು ತಾಲೂಕಿನ, ಕೊಳಗಾಮೆ, ಶಿರಗುಳ, ಬೊಗಸೆ, ಬೆರಣಗೋಡು, ಕಡೂರು ತಾಲೂಕಿನ ಹೇಳವರ ಕಾಲೋನಿ, ಶಿವಪುರ, ಎನ್. ಆರ್. ಪುರ ತಾಲೂಕಿನ ಹೆಬ್ಜೆ, ಆರಂಬಳ್ಳಿ, ಸಾರ್ಯ ಮತ್ತು ಮೂಡಿಗೆರೆ ತಾಲೂಕಿನ ಪಟ್ಟಣದೂರಿನಲ್ಲಿ ಈಗಾಗಲೇ ಹೊಸ ಟವರ್ ನಿಂದ 4ಜಿ ಸೇವೆ ಆರಂಭಿಸಲಾಗಿದೆ.

ಚಿಕ್ಕಮಗಳೂರಿನ ತಳಿಹಳ್ಳ, ಮೂಡಿಗೆರೆಯ ಹೊಸಹಳ್ಳಿ, ಬಲಿಗೆ, ಹೆಗ್ಗೊಡ್ಲು, ಅಲೆಕಾನ್ ಹೊರಟ್ಟಿ ಮತ್ತು ಹಾಲಗಡಗ ಕಳಸ ತಾಲೂಕಿನ ಬಲಿಗೆ ಮುಂತಾದ ಸ್ಥಳಗಳಲ್ಲಿ ಟವರ್ ನಿರ್ಮಾಣ ಕಾರ್ಯ ಮುಗಿದಿದ್ದು, ಸದ್ಯದಲ್ಲೇ 4ಜಿ ಸೇವೆ ಆರಂಭಗೊಳ್ಳಲಿದೆ.


ಇದನ್ನೂ ಓದಿ; ಕೃಷಿ ಯಂತ್ರಗಳ ಖರೀದಿಗೆ ಭಾರೀ ಸಬ್ಸಿಡಿ; ಹೀಗೆ ಅರ್ಜಿ ಸಲ್ಲಿಸಿ


ಹೊಸ ಬಿಎಸ್ಎನ್ಎಲ್ ಟವರ್ ಗಳಿಗೆ ಪ್ರಸ್ತಾಪನೆ:
217 ಟವರ್ ಗಳ ಪೈಕಿ ಚಿಕ್ಕಮಗಳೂರು ತಾಲೂಕಿನ 46, ತರೀಕೆರೆ 12, ಕಡೂರು 18, ಅಜ್ಜಂಪುರ 4, ಮೂಡಿಗೆರೆ 10, ಕಳಸ 4, ಕೊಪ್ಪ 15, ಎನ್. ಆರ್. ಪುರ 11, ಶೃಂಗೇರಿ 10 ಒಟ್ಟು 130 ಟವರ್ ಗಳಲ್ಲಿ 3ಜಿ ಸೇವೆ ಜೊತೆಗೆ 4ಜಿ ಸೇವೆಯನ್ನೂ ಆರಂಭಿಸಲಾಗಿದೆ. ಉಳಿದ 87 ಟವರ್ ಗಳಲ್ಲಿ 4 ಜಿ ಸೇವೆ ಸದ್ಯದಲ್ಲಿ ಕಾರ್ಯರಂಭ ಆಗಲಿದೆ. ಇದಲ್ಲದೆ ಜಿಲ್ಲೆಯಲ್ಲಿ ಬಂದ ಬೇಡಿಕೆಯಂತೆ 36 ಬಿಎಸ್ಎನ್ಎಲ್ ಹೊಸ ಟವರ್ ಗಳಿಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ.

ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ, ಬಿಎಸ್ಎನ್ಎಲ್ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವುದರೊಂದಿಗೆ ಪ್ರತಿ ಹಳ್ಳಿಗೂ ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕನಸನ್ನು ನನಸಾಗಿರಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ.


ಇದನ್ನೂ ಓದಿ; ರಾಜ್ಯದ SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಈ ವರ್ಷದ ಪ್ರಶ್ನೆಪತ್ರಿಕೆ ಕುರಿತು ಇಲ್ಲಿದೆ ನೋಡಿ ಡಿಟೈಲ್ಸ್


“ಬಿಎಸ್ಎನ್ಎಲ್ ನೆಟ್ವರ್ಕ್ ತೊಂದರೆಯಿಂದ ಇತರ ಖಾಸಗಿ ನೆಟ್ವರ್ಕ್ ಗಳತ್ತ ಸೇವೆ ವರ್ಗೀಕರಿಸಿ ಕೊಳ್ಳುತ್ತಿದ್ದ ಗ್ರಾಹಕರು, ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುನರಪಿ ಬಿಎಸ್ಎನ್ಎಲ್ ಗೆ ಮರಳಿ ಬರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ BSNL ನೆಟ್ವರ್ಕ್ ಸಂಪರ್ಕವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೊಣೆಗಾರಿಕೆ ನಮ್ಮದಾಗಿದೆ”.‌– ಕೋಟ ಶ್ರೀನಿವಾಸ್‌ ಪೂಜಾರಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.