ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಬೆಳೆ ಸಮೀಕ್ಷೆ ಪ್ರಕ್ರಿಯೆಯಿಂದ ದೀರ್ಘಾವಧಿ ಬೆಳೆಗಳನ್ನು ಕೈ ಬಿಡುವಂತೆ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ತೋಟಗಾರಿಕಾ ಮುಖ್ಯ ನಿರ್ದೇಶಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದನ್ನೂ ಓದಿ: ಜಮೀನಿನ ದಾರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!; ಏನದು? ಇಲ್ಲಿದೆ ನೋಡಿ

ಮನವಿ ಪತ್ರದಲ್ಲಿ ಏನಿದೆ?;
ಕಳೆದ ಕೆಲವು ವರ್ಷಗಳಿಂದ ಬೆಳೆ ಸರ್ವೆ ಆ್ಯಪ್ ಮೂಲಕ ಎಲ್ಲಾ ರೀತಿಯ ಬೆಳೆಗಳ ಬೆಳೆ ಸರ್ವೆ ಮಾಡುತ್ತಿರುವುದು ಸರಿಯಷ್ಟೆ. ಇದರಲ್ಲಿ ದೀರ್ಘಾವಧಿ ಅಥವಾ ಬಹುವಾರ್ಷಿಕ ಬೆಳೆಗಳಾದ ಅಡಿಕೆ, ಕಾಳುಮೆಣಸು, ಕಾಫಿ, ತೆಂಗು ಮುಂತಾದ ಬೆಳೆಗಳನ್ನು ಪ್ರತೀ ವರ್ಷವೂ ಆ್ಯಪ್ ಬಳಸಿ ಸರ್ವೆ ಮಾಡಬೇಕಾದ ಅಗತ್ಯವಿರುವುದಿಲ್ಲ. ಇದರಿಂದ ಬೆಳೆ ಸರ್ವೆಯನ್ನು ಮಾಡುವ ರೈತರಿಗೂ ಮಾಡಿದ ಸರ್ವೆಯನ್ನು ಪರಿಶೀಲಿಸಿ ಅನುಮೋಧಿಸುವ ಅಧಿಕಾರಿಗಳಿಗೂ ಅನಗತ್ಯ ಕೆಲಸದ ಹೊರೆಯಾಗಿರುತ್ತದೆ. ಜೊತೆಗೆ, ದೀರ್ಘಾವಧಿ ಅಥವಾ ಬಹುವಾರ್ಷಿಕ ಬೆಳೆಗಳನ್ನು ಪ್ರತಿ ವರ್ಷ ಸರ್ವೆ ಮಾಡುವುದರಿಂದ ಯಾರಿಗೂ ಯಾವ ಪ್ರಯೋಜನವೂ ಇರುವುದಿಲ್ಲ ಮತ್ತು ಇದೊಂದು ಅವೈಜ್ಞಾನಿಕ ವ್ಯರ್ಥ ಕಸರತ್ತು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಜಮಾ; ಜಮಾ ಆಗದೇ ಇರುವವರು ತಕ್ಷಣ ಈ ಕೆಲಸ ಮಾಡಿ
ದೀರ್ಘಾವಧಿ ಅಥವಾ ಬಹುವಾರ್ಷಿಕ ಬೆಳೆಗಳಾದ ಅಡಿಕೆ. ಕಾಳು ಮೆಣಸು, ಕಾಫಿ, ತೆಂಗು ಗಿಡಗಳನ್ನು ಒಮ್ಮೆ ನೆಟ್ಟರೆ 30 ರಿಂದ 40 ವರ್ಷ ಯಾರು ಬದಲಾಯಿಸುವುದಿಲ್ಲ. ಪ್ರತಿ ವರ್ಷ ಬೆಳೆ ಸರ್ವೇ ಮಾಡುವಾಗ PR ಗಳು ಅಥವಾ VA ಗಳ ಕೈ ತಪ್ಪಿಂದ ರೈತರ ಪಹಣಿಯಲ್ಲಿ ಮುಖ್ಯ ಬೆಳೆ ಅಡಿಕೆಯಿಂದ ಬದಲಾಗಿ ಕಾಫಿ, ತೆಂಗು ಎಂದು ಬದಲಾಗುತ್ತಿದೆ. ಇದರಿಂದ ರೈತರು ಬ್ಯಾಂಕ್ ವ್ಯವಹಾರ ಮಾಡಲು ಮತ್ತು ಸಬ್ಸಿಡಿ ಪಡೆಯುವಾಗ ಅಥವಾ ಬೆಳೆ ವಿಮೆ ಕಟ್ಟುವಾಗ ಸಮಸ್ಯೆ ಅನುಭವಿಸುತ್ತಿದ್ದು ಇದನ್ನು ತಿದ್ದುಪಡಿ ಮಾಡಿಸಲು ರೈತರು ಅನಾವಶ್ಯಕವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡ ಬೇಕಾಗುತ್ತಿದೆ.
ಇದನ್ನೂ ಓದಿ: ಜಿಯೋ ಕಂಪನಿಯಿಂದ ಬಿಡುಗಡೆಯಾಗಲಿದೆ 5G ಸ್ಮಾರ್ಟ್ ಫೋನ್; ಕೇವಲ 6 ಸಾವಿರಕ್ಕೆ ಸಿಗಲಿದೆ ಈ ಫೋನ್: ಯಾವಾಗ ಬಿಡುಗಡೆ?
ಇನ್ನು ಬೆಳೆ ಸಮೀಕ್ಷೆ ಮಾಡುವಾಗ ರೈತರ ಜಾಗದ ವಿಸ್ತೀರ್ಣವನ್ನು ಅಲ್ಲಿ ಬೆಳೆದಿರುವ ಮರದ ಅನುಗುಣವಾಗಿ ಸ್ವಯಂಚಾಲಿತವಾಗಿ ವಿಸ್ತೀರ್ಣವನ್ನು ದಾಖಲು ಮಾಡಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ಅಡಿಕೆ ಮಧ್ಯ ಕಾಫಿ ಬೆಳೆಯುವುದರಿಂದ 1 ಎಕರೆಯಲ್ಲಿ ಹೆಚ್ಚೆಂದರೆ 450 ಅಡಿಕೆ ಮರಗಳು ಇರುತ್ತವೆ. PR ಗಳು 450 ಮರ ಎಂದು ಆ್ಯಪ್ ನಲ್ಲಿ ದಾಖಲಿಸಿದರೆ ವಿಸ್ತೀರ್ಣ ಎಕರೆಗೆ ಬದಲು ಕೇವಲ 30 ಗುಂಟೆ ಎಂದು ದಾಖಲು ಆಗುತ್ತಿದೆ. ಇದರಿಂದ ಬೆಳೆ ವಿಮೆ ಕಟ್ಟುವ ಸಮಯದಲ್ಲಿ ಕಡಿಮೆ ವಿಸ್ತೀರ್ಣಕ್ಕೆ ವಿಮೆ ಕಟ್ಟುವ ಹಾಗೆ ಆಗುತ್ತಿದೆ. ಹಿಂದಿನಂತೆ ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ಬೆಳೆ ವಿಸ್ತೀರ್ಣವನ್ನು ದಾಖಲು ಮಾಡಲು ಅವಕಾಶ ನೀಡಬೇಕು.
ಇದನ್ನೂ ಓದಿ: 31 ಸಾವಿರ ರೈತರ ಬೆಳೆ ಸಾಲ ಮನ್ನಾ ಮಾಡಲು 232 ಕೋಟಿ ಹಣ ಬಿಡುಗಡೆ; ಬೆಳೆ ಸಾಲ ಮನ್ನಾ ರೈತರ ಪಟ್ಟಿ ಇಲ್ಲಿದೆ
ಈ ಎಲ್ಲಾ ಕಾರಣಗಳಿಂದ, ಶ್ರಮ ಮತ್ತು ಸಮಯದ ಅಪವ್ಯಯ ಉಂಟು ಮಾಡುವ ದೀರ್ಘಾವಧಿ ಅಥವಾ ಬಹುವಾರ್ಷಿಕ ಬೆಳೆಗಳ ಪ್ರತೀ ವರ್ಷದ ಬೆಳೆ ಸರ್ವೆಯನ್ನು. ತಕ್ಷಣವೇ ಬೆಳೆ ಸರ್ವೆ ಪ್ರಕ್ರಿಯೆಯಿಂದ ಕೈ ಬಿಟ್ಟು ಆದೇಶ ಹೊರಡಿಸಬೇಕೆಂದು ಹಾಗೂ ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ದೀರ್ಘ ಅವಧಿಗೊಮ್ಮೆ ಬೆಳೆ ಸರ್ವೆ ಮಾಡುವಾಗ. ಬೆಳೆ ವಿಸ್ತೀರ್ಣವನ್ನು ದಾಖಲು ಮಾಡಲು ಅವಕಾಶ ನೀಡಬೇಕು ಎಂದು ಬೆಳೆಗಾರರ ಪರವಾಗಿ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆಹಾನಿ ಪರಿಹಾರ ಜಮಾ!
ಈ ಸಂದರ್ಭದಲ್ಲಿ ಅರವಿಂದ ಸಿಗದಾಳ್, ಅಗಲಿ ನಾಗೇಶ್ ರಾವ್,ಜೆ. ಎಂ ಶ್ರೀಹರ್ಷ, ಕುಮಾರಸ್ವಾಮಿ, ಸತ್ಯಪ್ರಕಾಶ್, ಶ್ರೇಯಸ್, ಸುದನ್ವ, ಜೋಗಿಸರ ಸೂರ್ಯನಾರಾಯಣ, ಅಧ್ಯಕ್ಷ ತಲವಾನೆ ಪ್ರಕಾಶ್ ಕುಕ್ಕೊಡಿಗೆ ರವೀಂದ್ರ, ಸತೀಶ್ ಜೈನ್ ಇದ್ದರು.
ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ಮತ್ತೊಂದು ಹೊಸ ರೂಲ್ಸ್; ಕಡ್ಡಾಯವಾಗಿ ಈ ಕೆಲಸ ಮಾಡುವಂತೆ ಸೂಚನೆ; ಏನದು? ಇಲ್ಲಿದೆ ನೋಡಿ












