ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಆಟವಾಡುತ್ತಾ ರಸ್ತೆಗೆ ಬಂದ ಮಗುವಿಗೆ ಕಾರು ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆ ಬಳಿ ಇಂದು (ರವಿವಾರ) ನಡೆದಿದೆ.
ತ್ರಿಯಂಬಕಪುರ ಗ್ರಾ.ಪಂ. ವ್ಯಾಪ್ತಿಯ ಗುಡ್ಡೆಪಾಲ್ ಸಮೀಪದ ಗುಂಡುಗದ್ದೆಯ ಪ್ರಗತ್ ಎಂಬವರ ಮಗು ದೃಶ್ಯ (6) ಮೃತಪಟ್ಟಿದೆ.
ಮನೆಯ ಪಕ್ಕದಲ್ಲಿ ಲಾರಿಯೊಂದು ನಿಂತಿತ್ತು. ಮಗು ಆಟವಾಡಲು ರಸ್ತೆಗೆ ಬಂದಿದ್ದು, ಲಾರಿ ಇದ್ದ ಕಾರಣ ಮಗು ಕಾಣದೆ ರಸ್ತೆಯಲ್ಲಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆ ತಂದರೂ ಅಷ್ಟರಲ್ಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ ಸಾವು
















