ಚಿಕ್ಕಮಗಳೂರು: ದ್ವಿಚಕ್ರ ವಾಹನ ಕಳ್ಳತನ: 3 ಜನ ಅಂತರ್ ಜಿಲ್ಲಾ ಆರೋಪಿಗಳ ಬಂಧನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನವಾಗುತ್ತಿದ್ದ ಹಿನ್ನಲೆಯಲ್ಲಿ ರಚಿಸಿದ್ದ ವಿಶೇಷ ಪೊಲೀಸ್ ತಂಡವು 3 ಜನ ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿ 8.5 ಲಕ್ಷ ಬೆಲೆಯ 17 ಬೈಕ್, 2.15 ನಗದು ಮತ್ತು 50 ಸಾವಿರ ಮೌಲ್ಯದ ಬೈಕ್ ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಆರೋಪಿಗಳು ಚಿಕ್ಕಮಗಳೂರು ನಗರದಲ್ಲಿ 22 ಬೈಕ್, ಕಡೂರು ಪಟ್ಟಣದಲ್ಲಿ 1 ಬೈಕ್, ತರೀಕೆರೆ ಪಟ್ಟಣದಲ್ಲಿ 1 ಬೈಕ್, ಶಿವಮೊಗ್ಗ ನಗರದಲ್ಲಿ 2 ಬೈಕ್, ಭದ್ರಾವತಿಯಲ್ಲಿ 2 ಬೈಕ್ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 2 ಬೈಕ್ ಗಳನ್ನು ಕಳವು ಮಾಡಿದ್ದು, ಅವುಗಳಲ್ಲಿ 17 ಬೈಕ್ ಸುಸ್ಥಿತಿಯಲ್ಲಿದ್ದು, 13 ಬೈಕ್ ಗಳನ್ನು ಗುಜರಿಗೆ ಮಾರಾಟ ಮಾಡಿದ್ದಾರೆ.


ಇದನ್ನೂ ಓದಿ: 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ತಿಂಗಳಿಗೆ ಸಿಗಲಿದೆ 1,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಈ ಕಾರ್ಯಾಚಾರಣೆಯಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಕಲೈಮಾರ್ ಮತ್ತು ಪಿ.ಎಸ್.ಐ. ಬಾಬುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಲಿಂಗಮೂರ್ತಿ, ಮಧಸೂಧನ್, ನಂಜಪ್ಪ, ಮಧುಕುಮಾರ್, ಪ್ರದೀಪ ಮತ್ತು ನವೀನ ಇದ್ದರು.

ಕಡೂರು: ಸರ್ಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಪ್ರಿಂಟರ್ ಕಳವು: ಆರೋಪಿ ಬಂಧನ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ 3 ಪ್ರಿಂಟರ್ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿವಿಧೆಡೆ ಕಳವು ಮಾಡಿದ್ದ ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಚಿಕ್ಕಮಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಸರ್ಕಾರಿ ಕಚೇರಿ, ಮೆಸ್ಕಾಂ ಮತ್ತು ಬೆಸ್ಕಾಂ ಕಛೇರಿ, ನ್ಯಾಯಾಲಯ ಮತ್ತು ಕಾಲೇಜುಗಳಿಂದ ಪ್ರಿಂಟರ್ ಗಳನ್ನು ಕಳವು ಮಾಡಿದ್ದು, ಸುಮಾರು 6.22 ಲಕ್ಷ ಬೆಲೆಯ 79 ಪ್ರಿಂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ತಂಡದಲ್ಲಿ ಸಿಪಿಐ ಕಡೂರು ದುರುಗಪ್ಪ ಕೆ, ಪಿ.ಎಸ್.ಐ ನವೀನ್ ಎನ್. ಪಿ ಮತ್ತು ಪವನ್ ಕುಮಾರ್ ಸಿ . ಸಿ, ಸಿಬ್ಬಂದಿಗಳಾದ ಮಂಜುನಾಥಸ್ವಾಮಿ, ಕುಚೇಲ, ಸ್ವಾಮಿ, ದೇವರಾಜ್, ಬೀರೇಶ, ಮಧು, ಹರೀಶ, ಮಹಮ್ಮದ್ ರಿಯಾಜ್, ಈಶ್ವರಪ್ಪ, ಕಿಶೋರ್, ರವಿ ಕುಮಾರ್, ಧನಪಾಲನನಾಯ್ಕ ಮತ್ತು ಜಯಮ್ಮ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.