ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರ ಡಿ.7 ರಂದು ಬೆಳಿಗ್ಗೆ 10.30 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ ಹೇಳಿದರು.
ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಳ್ತಂಗಡಿಯ ಸುವರ್ಣ ಆರ್ಕೆಡ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅದಮ್ಯ ಚೇತನ ಫೌಂಡೇಶನ್ ಬೆಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟಿ, ಡಾ. ತೇಜಸ್ವಿನಿ ಅನಂತಕುಮಾರ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.


ವಿಧಾನಪರಿಷತ್ ಉಪಸಭಾಪತಿ ಎಂ. ಕೆ ಪ್ರಾಣೇಶ್ ಅಧ್ಯಕ್ಷತೆ ವಹಿಸುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಎಂಎಲ್ ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಎಂ ಎಲ್ ಸಿ ಕೆ. ಹರೀಶ್ ಕುಮಾರ್, ಮಂಗಳೂರು ಕೆಎಂಸಿ ಆಸ್ಪತ್ರೆಯ ರೀಜನಲ್ ಚೀಫ್ ಆಪರೇಟಿಂಗ್ ಆಫೀಸರ್ ಸಗೀರ್ ಸಿದ್ದಿಕಿ, ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್, ಎಸ್ ಕೆ ಡಿ ಆರ್ ಡಿ ಪಿ ಧರ್ಮಸ್ಥಳ ಇದರ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಚಾರ್ಮಾಡಿ ಗ್ರಾಪಂ ಅಧ್ಯಕ್ಷೆ ಶಾರದಾ, ನೆರಿಯ ಸಂತ ತೋಮಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ತ್ರೇಸಿಯಾ ಕೆ. ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ; ಕೃಷಿ ಯಂತ್ರಗಳ ಖರೀದಿಗೆ ಭಾರೀ ಸಬ್ಸಿಡಿ; ಹೀಗೆ ಅರ್ಜಿ ಸಲ್ಲಿಸಿ
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ವಂದನಾ ಇರ್ವತ್ರಾಯ ಮಾತನಾಡಿ, 1999 ರಲ್ಲಿ ಶ್ರೀ ಕೃಷ್ಣ ಆಸ್ಪತ್ರೆ ಸಣ್ಣ ಕ್ಲಿನಿಕ್ ಆಗಿ ಆರಂವಾಯಿತು. 2009 ರಲ್ಲಿ 10 ಬೆಡ್, ಒಪಿಡಿ, 2011ರಲ್ಲಿ 35 ಬೆಡ್, ಎಕ್ಸ್ ರೇ ಲ್ಯಾಬ್, ಒಟಿ ಇತ್ಯಾದಿಗಳೊಂದಿಗೆ ಮುಂದುವರಿದು, 2022 ರಿಂದ ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಕಕ್ಕಿಂಜೆ ಮೂಡಿಗೆರೆ, ಬಣಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆ ಪ್ರಸ್ತುತ 50 ಬೆಡ್ ಹೊಂದಿದ್ದು, ಎನ್ ಎಬಿಎಚ್ ಮಾನ್ಯತೆಯನ್ನು ಪಡೆದಿದೆ. ಹಿರಿಯ ನಾಗರಿಕರಿಗೆ ಶ್ರೀ ಕೃಷ್ಣ ಚೈತನ್ಯ ಹಾಗೂ ಮನೆಬಾಗಿಲಿಗೆ ಸೇವೆ ನೀಡುವ ಶ್ರೀ ಕೃಷ್ಣ ಯೋಗಕ್ಷೇಮವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ; ರಾಜ್ಯದ SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಈ ವರ್ಷದ ಪ್ರಶ್ನೆಪತ್ರಿಕೆ ಕುರಿತು ಇಲ್ಲಿದೆ ನೋಡಿ ಡಿಟೈಲ್ಸ್
ಕೆಎಂಸಿ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್, ಜನ ಸಂಪರ್ಕ ವಿಭಾಗದ ಮುಖ್ಯಸ್ಥ ರಾಕೇಶ್ ಉಪಸ್ಥಿತರಿದ್ದರು. (ವರದಿ- ತನು ಕೊಟ್ಟಿಗೆಹಾರ)













