ಮೂಡಿಗೆರೆ: ಹುಲಿ ದಾಳಿಯಿಂದ ಮೂರು ಕರುಗಳು ಸಾವು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಹೋಬಳಿಯ ಬಿ.ಹೊಸಳ್ಳಿ ದುಗ್ಗಿನಮಕ್ಕಿ ಗ್ರಾಮದಲ್ಲಿ ಹುಲಿ ದಾಳಿ ಮಾಡಿ ಮೂರು ಕರುಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಬಿ.ಹೊಸಳ್ಳಿ ಗ್ರಾಮದ ಅಶೋಕಗೌಡ ಮತ್ತು ರುದ್ರಪ್ಪಗೌಡ ಎಂಬುವವರ ಮೂರು ಕರುಗಳ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದೆ. ಘಟನೆ ನಡೆದ ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಉಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

 

ಇದನ್ನೂ ಓದಿ; RBI ನಿಂದ ಉದ್ಯೋಗಾವಕಾಶ; ವಿವಿಧ ಪ್ರದೇಶಗಳಲ್ಲಿ ಮೆಡಿಕಲ್ ಕನ್ಸಲ್‌ ಟಂಟ್‌ಗಳ ನೇಮಕ

ಹುಲಿ ಸ್ಥಳಾಂತರಕ್ಕೆ ಸಾರ್ವಜನಿಕರ ಒತ್ತಾಯ:
ಬಿ.ಹೊಸಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ಈ ಭಾಗದ ಭಾರತೀಬೈಲ್, ಬಿ.ಹೊಸಳ್ಳಿ, ಹೊಕ್ಕಳ್ಳಿ, ಹೆಗ್ಗುಡ್ಲು ಭಾಗದಲ್ಲಿ ನೂರಕ್ಕೂ ಅಧಿಕ ದನಗಳು ಹುಲಿಯ ದಾಳಿಯಿಂದ ಸತ್ತಿದ್ದರೂ ಕೂಡ ಅರಣ್ಯ ಇಲಾಖೆ ಹುಲಿ ಸ್ಥಳಾಂತರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಹುಲಿ ಸ್ಥಳಾಂತರಕ್ಕೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರೂ ಹುಲಿ ಸೆರೆ ಹಿಡಿಯಲು ಮೀನಾಮೇಷ ಎಣಿಸುವಂತಾಗಿದೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹೆಚ್ಚು ತಿರುಗುತ್ತಿದ್ದು ಮನುಷ್ಯರ ಮೇಲೆ ಎರಗುವ ಸಾಧ್ಯತೆಗಳು ಹೆಚ್ಚಿವೆ. ಹುಲಿಯ ದಾಳಿಯಿಂದ ಕೂಲಿ ಕಾರ್ಮಿಕರು ಶಾಲಾ ಮಕ್ಕಳು ಕೂಡ ರಸ್ತೆಯಲ್ಲಿ ಓಡಾಡಲು ಭಯ ಪಡುವಂತಾಗಿದೆ. ನಿರಂತರ ಗ್ರಾಮಗಳಲ್ಲಿ ದಾಳಿ ಮಾಡುತ್ತಿರುವ ಹುಲಿಯನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಚಂದನ್ ಗೌಡ ಒತ್ತಾಯಿಸಿದ್ದಾರೆ.

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ; ನಿಮ್ಮ ಖಾತಗೆ ಬಂದಿದ್ಯಾ ಹಣ

ಹುಲಿ ದಾಳಿಗೆ ಬಿ.ಹೊಸಳ್ಳಿ ಭಾಗದ ಮೂರು ಕರುಗಳು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪರಿಹಾರಕ್ಕಾಗಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ– ಉಮೇಶ್, ಉಪ ವಲಯ ಅರಣ್ಯಾಧಿಕಾರಿ. (ವರದಿ- ತನು ಕೊಟ್ಟಿಗೆಹಾರ)

ಜಯಪುರ: ಚಾಲಕನ ನಿಯಂತ್ರಣ ತಪ್ಪಿ ಅಯ್ಯಪ್ಪ ಮಾಲಾಧಾರಿಗಳ ಬಸ್ ಪಲ್ಟಿ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಅಯ್ಯಪ್ಪ ಮಾಲಾಧಾರಿಗಳ ಬಸ್ ಪಲ್ಟಿಯಾಗಿರುವ ಘಟನೆ ಭಾನುವಾರ (ನಿನ್ನೆ)  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟದ ಬಳಿ ನಡೆದಿದೆ.

 

ಇದನ್ನೂ ಓದಿ; ಕೃಷಿ ನವೋದ್ಯಮ ಯೋಜನೆ; ಸ್ಟಾರ್ಟಪ್ ನಡಿ ಗರಿಷ್ಠ 20 ಲಕ್ಷ ರೂ. ವರೆಗೆ ಸಹಾಯಧನ

ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳ ಬಸ್ ಗುಡ್ಡೇತೋಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ರಂಗಸಮುದ್ರ ಗ್ರಾಮದ 34 ಅಯ್ಯಪ್ಪ ಮಾಲಾಧಾರಿಗಳು ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಜಯಪುರ, ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ;ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗಾವಕಾಶ;133 ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ; ನೇರ ಸಂದರ್ಶನದ ಮೂಲಕ ಆಯ್ಕೆ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.