
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಅಯ್ಯಪ್ಪ ಮಾಲಾಧಾರಿಗಳ ಬಸ್ ಪಲ್ಟಿಯಾಗಿರುವ ಘಟನೆ ಭಾನುವಾರ (ನಿನ್ನೆ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟದ ಬಳಿ ನಡೆದಿದೆ.
ಇದನ್ನೂ ಓದಿ; RBI ನಿಂದ ಉದ್ಯೋಗಾವಕಾಶ; ವಿವಿಧ ಪ್ರದೇಶಗಳಲ್ಲಿ ಮೆಡಿಕಲ್ ಕನ್ಸಲ್ ಟಂಟ್‌ಗಳ ನೇಮಕ

ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳ ಬಸ್ ಗುಡ್ಡೇತೋಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ರಂಗಸಮುದ್ರ ಗ್ರಾಮದ 34 ಅಯ್ಯಪ್ಪ ಮಾಲಾಧಾರಿಗಳು ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಜಯಪುರ, ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ; ನಿಮ್ಮ ಖಾತಗೆ ಬಂದಿದ್ಯಾ ಹಣ
ಮೂಡಿಗೆರೆ: ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಆರೋಪಿ ಬಂಧನ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಬೇಲೂರು ಮೂಲದ ಇದ್ರಿಸ್ ಪಾಷಾ (33) ಬಂಧಿತ ಆರೋಪಿ.
ಚಾರ್ಮಾಡಿಗೆ ಗಾಂಜಾ ಮಾರಲು ತೆರಳುತ್ತಿದ್ದ ಆರೋಪಿಯನ್ನ, ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಹೊರನಾಡು ಸಂಪರ್ಕಿಸುವ ರಸ್ತೆ ಕೊಟ್ಟಿಗೆಹಾರ ಸಮೀಪದಲ್ಲೇ 1.550 ಕೆ.ಜಿ. ಗಾಂಜಾ ಹಾಗೂ ಮಾರುತಿ ಕಾರ್ ಸಮೇತ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ
ಇನ್ನು ಕಾರ್ಯಾಚರಣೆಯಲ್ಲಿ CEN ಅಪರಾಧ ಪೊಲೀಸ್ ಠಾಣಾ ಪಿ.ಎಸ್.ಐ. ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್, ಹರೀಶ್, ರಮೇಶ್, ಮಹೇಂದ್ರ ಮತ್ತು ಮಂಜುನಾಥ್ ಇದ್ದರು.













