ಚಿಕ್ಕಮಗಳೂರು: ಪೊಲೀಸ್ vs ವಕೀಲರ ಗಲಾಟೆ ಪ್ರಕರಣ | 10 ತಿಂಗಳ ಬಳಿಕ‌ ಚಾರ್ಜ್ ಶೀಟ್ ಸಲ್ಲಿಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಸುದ್ದಿಯಾಗಿದ್ದ ವಕೀಲರು, ಪೊಲೀಸರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ತಿಂಗಳ ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.


ಇದನ್ನೂ ಓದಿ; ಸಂತೂರ್ ಸ್ಕಾಲರ್ಶಿಪ್ ಪ್ರೋಗ್ರಾಂ; ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 24,000 ಸ್ಕಾಲರ್ ಶಿಪ್; ದಾಖಲೆ, ಅರ್ಹತೆ, ಅರ್ಜಿ ಸಲ್ಲಿಕೆ ಹೇಗೆ ಎಂಬ ಡಿಟೈಲ್ಸ್ ಇಲ್ಲಿದೆ


ಏನಿದು ಪ್ರಕರಣ:
ಹೆಲ್ಮಟ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ನ.30ರಂದು ವಕೀಲ ಪ್ರೀತಮ್ ಎಂಬುವವರ ಮೇಲೆ PSI ಸೇರಿದಂತೆ 7 ಜನ ಪೊಲೀಸರು ಸೇರಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ಠಾಣೆ ಮುಂದೆ ವಕೀಲರು ಜಮಾಯಿಸಿ ಆಕ್ರೋಶ ಹೊರಹಾಕಿದ್ದರು. ವಿಚಾರಣೆ ನಡೆಸಿ ಎಸ್‌ಪಿ ವಿಕ್ರಂ ಅಮಟೆ, ಪಿಎಸ್‌ಐ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿದ್ದರು. ಜೊತೆಗೆ ಹಲ್ಲೆ ಮಾಡಿದ ಪೊಲೀಸರ ವಿರುದ್ದ ಐಪಿಸಿ ಸೆಕ್ಷನ್ 307, 324, 506, 504ರ ಅಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ವಕೀಲರು ಠಾಣೆಯಲ್ಲಿಯೇ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ 15 ವಕೀಲರ ವಿರುದ್ಧ ಸೆಕ್ಷನ್ 503, 406, 353, 149 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ ವರ್ಸಸ್ ವಕೀಲರ ಗಲಾಟೆ ತಾರಕಕ್ಕಿರುತ್ತಿದ್ದಂತೆ ರಾಜ್ಯ ಸರ್ಕಾರ COD DIG ವಂಶಿಕೃಷ್ಣ ನೇತೃತ್ವದ ತನಿಖೆಗೆ ಆದೇಶ ನೀಡಿತ್ತು. ಇದೀಗ 10 ತಿಂಗಳ ಬಳಿಕ CID DYSP ಉಮೇಶ್ ಅವರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.


ಇದನ್ನೂ ಓದಿ; ಇನ್ಫೋಸಿಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ; ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ ಶಿಪ್; ಈ ಅರ್ಹತೆ, ದಾಖಲೆ ಕಡ್ಡಾಯ


ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆ:
ವಕೀಲ ಪ್ರೀತಮ್ ನೀಡಿದ ಪ್ರಕರಣ ಸಂಬಂಧ 700 ಪುಟಗಳ ಚಾರ್ಜ್ ಶೀಟ್ ಹಾಗೂ ಪ್ರೀತಮ್ ವಿರುದ್ಧ ಪೋಲಿಸರು ನೀಡಿದ ದೂರಿನ ಮೇಲೆ 345 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.


ಇದನ್ನೂ ಓದಿ; ವಾಹನ ಮಾಲೀಕರ ಗಮನಕ್ಕೆ; ಇನ್ನೂ ನಿಮ್ಮ ವಾಹನಕ್ಕೆ HSRP ನಂಬರ್​ ಪ್ಲೇಟ್ ಹಾಕಿಸಿಲ್ಲವೇ..?​; ನಂಬರ್ ಪ್ಲೇಟ್ ಅಳವಡಿಸಲು 4 ದಿನ ಮಾತ್ರ ಬಾಕಿ; ಇನ್ಮೇಲೆ ಬೀಳುತ್ತೆ ಭಾರೀ ದಂಡ..!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.