ಎನ್.ಆರ್.ಪುರ: ಭದ್ರಾ ಹಿನ್ನೀರು ಬಳಿ ಬೀಡುಬಿಟ್ಟ 17 ಕಾಡಾನೆ

ಎನ್.ಆರ್.ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ಜನರು 17 ಕಾಡಾನೆಗಳ ಹಿಂಡು ಕಂಡು ಆತಂಕಕ್ಕೊಳಗಾಗಿದ್ದು, ಸದ್ಯ ಭದ್ರಾ ಹಿನ್ನೀರು ದಾಟಿ, ಕಾಡಂಚಿನ ತೋಟಗಳಲ್ಲಿ ಆನೆಗಳು ಬೀಡು ಬಿಟ್ಟಿವೆ.

 

ಇದನ್ನೂ ಓದಿ; ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆದ ಕಿಡಿಗೇಡಿಗಳು!; ಭಕ್ತರೆನಿಸಿಕೊಂಡವರೆ ಹೀಗೆ ಮಾಡಿದ್ರಾ? ಏನಿದು ವಿವಾದ?

ಕಳೆದೊಂದು ತಿಂಗಳಿಂದ ಆನೆ ಹಾವಳಿ ತೀವ್ರವಾಗಿದ್ದು, ಜನರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಹಳುವಳ್ಳಿ ಎಂಬ ಹಳ್ಳಿಯ ಜನರೇ ಸೇರಿ ಬೇಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಭದ್ರಾ ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಆನೆಗಳು ನದಿ ದಾಟಿ ಗ್ರಾಮಗಳತ್ತ ಬರುತ್ತಿವೆ. ನಿತ್ಯವೂ ಒಂದೊಂದು ಹಳ್ಳಿಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದೆ. ಆನೆಗಳು ಕಾಣಿಸಿಕೊಂಡಿರುವ ಹಳುವಳ್ಳಿಯಿಂದ ಎನ್.ಆರ್.ಪುರ ತಾಲೂಕು ಕೇಂದ್ರಕ್ಕೆ ಒಂದು ಕಿ.ಮೀ. ದೂರವಿದ್ದು ತಾಲೂಕು ಕೇಂದ್ರಕ್ಕೆ ಲಗ್ಗೆ ಇಡುವ ದಿನ ದೂರವಿಲ್ಲ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ; ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ; ಈ ರೀತಿ ಚೆಕ್ ಮಾಡಿ

ಪಟಾಕಿ ಸಿಡಿಸಿದರೂ ಕ್ಯಾರೆ ಅನ್ನದ ಕಾಡಾನೆಗಳು ಈಗಾಗಲೇ ನೂರಾರು ಎಕರೆ ಅಡಿಕೆ, ತೆಂಗು, ಬಾಳೆ, ಭತ್ತದ ಕೃಷಿಯನ್ನು ನಾಶ ಮಾಡಿವೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

 

ಅಧಿಕಾರಿಗಳಿಗೆ ಹೇಳಿದ್ರೆ ಬಂದು ಫೋಟೋ ಹೊಡ್ಕಂಡು ಹೋಗ್ತಾರಷ್ಟೆ:
ಆನೆಗಳ ಹಿಂಡು ಬಂದು ಬೆಳೆಗಳನ್ನು ಹಾನಿ ಮಾಡಿದೆ ಎಂದು ತಿಳಿಸಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತೋಟಕ್ಕೆ ಬಂದು ಕೇವಲ ಫೋಟೋ ತೆಗೆದುಕೊಂಡು ಹೋದರು. ಆನೆಗಳು ಪ್ರತಿನಿತ್ಯ ದಾಳಿ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಈ ರೀತಿಯ ಅಲಕ್ಷ್ಯದ ವರ್ತನೆ ಸರಿಯಲ್ಲ. ಆನೆಗಳನ್ನು ಓಡಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಸ್ಥರಿಂದಲೇ ಬೇಲಿ ನಿರ್ಮಾಣ
ಆನೆಗಳ ಹಾವಳಿಗೆ ಬೇಸತ್ತು ಗ್ರಾಮಸ್ಥರೇ ಭದ್ರಾ ಹಿನ್ನೀರಿನ ಗಡಿಯಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿದ್ದಾರೆ. ಭದ್ರಾ ಹಿನ್ನೀರಿನ ಸಮೀಪದ ತೋಟದ ಕೆಲವು ಮಾಲೀಕರು ಆನೆಗಳ ಹಾವಳಿಗೆ ತಡೆಯಲು ಐಬೆಕ್ಸ್ ತಂತಿ ಬೇಲಿ ಹಾಕಿಸಿದ್ದಾರೆ.

 

ನಕ್ಸಲರ ಗುಂಪಿನ ಮೇಲೆ ಆನೆ ದಾಳಿ! | ಚಿಕ್ಕಮಗಳೂರಿನ ಮೂಡಿಗೆರೆಯ ನಕ್ಸಲ್ ಅಂಗಡಿ ಸುರೇಶ್ ಬಂಧನ!

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶ್ ನನ್ನು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನಕ್ಸಲ್ ಸುರೇಶ್ ಗೆ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಿಚಾರ ತಿಳಿದು ದಾಳಿ ನಡೆಸಿದ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ.

 

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್, ಕಳೆದ 10 ವರ್ಷಗಳಿಂದ ನಕ್ಸಲ್ ಆಗಿದ್ದಾನೆ. ಸುರೇಶ್ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆಯನ್ನು ಕೂಡ ಪೊಲೀಸ್  ಇಲಾಖೆ ಮಾಡಿತ್ತು. ಸುರೇಶ್ ವಿರುದ್ಧ ಚಿಕ್ಕಮಗಳೂರು ಉಡುಪಿಯ ಶಿವಮೊಗ್ಗ ಜಿಲ್ಲೆಯಲ್ಲಿ ಕೇಸ್ ದಾಖಲಾಗಿದ್ದು, 10 ಕ್ಕೂ ಅಧಿಕ ಪ್ರಕರಣಗಳಲ್ಲಿ ಸುರೇಶ್ ಪೊಲೀಸರಿಗೆ ಬೇಕಾಗಿರುವ ಆರೋಪಿ. ಸದ್ಯ ಕೇರಳ ಪೊಲೀಸರ ವಶದಲ್ಲಿರುವ ಸುರೇಶ್ ನನ್ನು ಚಿಕ್ಕಮಗಳೂರಿಗೆ ಕರೆತರಲಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.