ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಿಡಾಡಿ ದನಕ್ಕೆ ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಪರಿಣಾಮ ವೇಗವಾಗಿ ಚಲಿಸುತ್ತಿದ್ದ ಗ್ಯಾಸ್ ಲಾರಿ ಬೈಕ್ ಸವಾರನ ಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಬಸ್ ಡಿಪೋ ಬಳಿ ಶನಿವಾರ ನಡೆದಿದೆ. ಲಾರಿ ಚಕ್ರದಡಿಗೆ ಸಿಲುಕಿದ ಪರಿಣಾಮವಾಗಿ ವಿಶ್ವೇಂದ್ರ (43) ಎಂಬ ದುರ್ದೈವಿ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; ಈ ದಿನ ರೈತರ ಖಾತೆಗೆ ಬರಲಿದೆ 15ನೇ ಕಂತಿನ ಹಣ; ಹಣ ರಿಲೀಸ್ ಗೆ ಡೇಟ್ ಫಿಕ್ಸ್

ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಭೀಕರ ಅಪಘಾತ ನಡೆದಿದ್ದು, ಬೈಕ್ ಹಿಂಬದಿ ಸವಾರೆಯಾಗಿದ್ದ ಲಕ್ಷ್ಮೀ ಎಂಬ ಮಹಿಳೆಯ ಕಾಲು ತುಂಡಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರೂ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಲ್ಕೆರೆ ಗ್ರಾಮದವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ; 15ನೇ ಕಂತಿನ ಹಣ ಪಡೆಯುವವರ ಹೆಸರು ಬಿಡುಗಡೆ; ಈ ಕೆಲಸ ಮಾಡದಿದ್ದರೆ ಖಾತೆಗೆ ಹಣ ಬರಲ್ಲ
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ದತ್ತಮಾಲ ಅಭಿಯಾನ | ಎಲ್ಲೆಡೆ ಬಿಗಿ ಬಂದೋಬಸ್ತ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಶ್ರೀರಾಮ ಸೇನೆ ನಡೆಸುತ್ತಿರುವ ದತ್ತಮಾಲಾ ಅಭಿಯಾನದ ಭಾಗವಾಗಿ ಭಾನುವಾರ ಶೋಭಾಯಾತ್ರೆ ನಡೆಯಲಿದ್ದು, ಭದ್ರತೆ ಸೇರಿ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲಾಡಳಿತದಿಂದ ಭದ್ರತೆ:
ಅಭಿಯಾನದ ಅಂತಿಮ ದಿನವಾದ ಭಾನುವಾರ ನಗರದ ಶಂಕರಮಠದಿಂದ ಎಂ.ಜಿ.ರಸ್ತೆ ಮೂಲಕ ಅಜಾದ್ ಪಾರ್ಕ್ ತನಕ ಶೋಭಾಯಾತ್ರೆ ನಡೆಯಲಿದೆ. ಬಳಿಕ ಮಾಲಾಧಾರಿಗಲು ಚಂದ್ರದ್ರೋಣ ಪರ್ವತ ಏರಿ ಇನಾಂ ದತ್ತಾತ್ರೇಯ ಪೀಠ (ಐ.ಡಿ. ಪೀಠ) ವ್ಯಾಪ್ತಿಯಲ್ಲಿ ಸತ್ಯ ದತ್ತವ್ರತ ಮತ್ತು ದತ್ತ ಹೋಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಊಹಿಸಿದೆ. ಸೂಕ್ತ ಭದ್ರತೆ ಒದಗಿಸಲು ತಯಾರಿ ನಡೆಸಿದೆ.
ಒಂದೂವರೆ ಸಾವಿರ ಪೊಲೀಸರ ನಿಯೋಜನೆ:
ದತ್ತಮಾಲ ಅಭಿಯಾನಕ್ಕೆ ಭದ್ರತೆ ಒದಗಿಸಲು ಹೊರ ಜಿಲ್ಲೆಯ ಒಂದೂವರೆ ಸಾವಿರ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. 6 ಡಿವೈಎಸ್ಪಿ, 20 ಇನ್ಸ್ಪೆಕ್ಟರ್ಗಳು, 89 ಸಬ್ ಇನ್ ಸ್ಪೆಕ್ಟರ್, 141 ಎ.ಎಸ್.ಐಗಳು, 956 ಹೆಡ್ ಕಾನ್ ಸ್ಟೆಬಲ್ ಮತ್ತು ಕಾನ್ ಸ್ಟೆಬಲ್ ಗಳು, 250 ಗೃಹ ರಕ್ಷಕ ಸಿಬ್ಬಂದಿ, 8 ಕೆಎಸ್ಆರ್ಪಿ ತುಕಡಿ ಮತ್ತು 12 ಸಶಸ್ತ್ರ ಮೀಸಲುಪಡೆ ತಕಡಿ ನಿಯೋಜಿಸಲಾಗಿದೆ. 80 ಸೆಕ್ಷನ್ ಪಾಯಿಂಟ್ ಗಳನ್ನು ಗುರುತಿಸಲಾಗಿದೆ. ಪಾಯಿಂಟ್ ಗಳ ಸೂಕ್ಷ್ಮತೆ ಆಧರಿಸಿ ಅಲ್ಲಿಗೆ ಎಷ್ಟು ಸಿಬ್ಬಂದಿ ನಿಯೋಜಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 26 ಚೆಕ್ಪೋಸ್ಟ್:
ಜಿಲ್ಲೆಯ ಗಡಿಭಾಗ ನಗರ ಮತ್ತು ಗಿರಿಭಾಗ ಸೇರಿ ಒಟ್ಟು 26 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಜಿಲ್ಲೆಯಾದ್ಯಂತ 49 ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಹೊರ ಜಿಲ್ಲೆಗಳಿಂದ ಬರುವ ವಾಹನಗಳ ತಪಾಸಣೆಗೆ ಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು ಇನ್ನೆರಡು ದಿನ ಜಿಲ್ಲೆಗೆ ಬರುವ ವಾಹನಗಳ ಮೇಲೆ ಪೊಲೀಸರು ನಿಗಾ ಇಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಮೂರು ದಿನ ಪ್ರವಾಸ ನಿರ್ಬಂಧ:
ದತ್ತಮಾಲಾ ಅಭಿಯಾನದ ಅಂಗವಾಗಿ ನ.೪ರಿಂದ (ಶನಿವಾರ) ನ.6ರ ಬೆಳಿಗ್ಗೆ 10 ಗಂಟೆ ತನಕ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ಐ.ಡಿ ಪೀಠ ಮಾಣಿಕ್ಯಧಾರಾ ಜಲಪಾತ ಗಾಳಿಕೆರೆ ಪ್ರವಾಸಿತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ದಟ್ಟಣೆ ಉಂಟಾಗುವ ಕಾರಣಕ್ಕೆ ಬೇರೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.












