ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದಿಂದ ಪರಿಶೀಲನೆ ಆರಂಭವಾಗಿದೆ.
ಇದನ್ನೂ ಓದಿ: ಜಮೀನಿನ ದಾರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!; ಏನದು? ಇಲ್ಲಿದೆ ನೋಡಿ

ನೆರೆಯ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಬಳಿಕ ಎಚ್ಚೆತ್ತ ಸರ್ಕಾರ ಮಲೆನಾಡು ಭಾಗದಲ್ಲಿ ಅಪಾಯಕಾರಿ ಸ್ಥಳಗಳ ಪಟ್ಟಿ ಕೇಳಿತ್ತು. ಜಿಲ್ಲಾಡಳಿತ 88 ಅಪಾಯಕಾರಿ ಸ್ಥಳವನ್ನು ಗುರುತು ಮಾಡಿ ವರದಿ ಕಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಚಂದ್ರದ್ರೋಣ ಪರ್ವತದ ಕವಿಕಲ್ ಗಂಡಿ ಬಳಿ ಜಿಯೋಲಾಜಿಕಲ್ ಸರ್ವೇ ತಂಡದಿಂದ ಪರಿಶೀಲನೆ ಆರಂಭವಾಗಿದೆ.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆಹಾನಿ ಪರಿಹಾರ ಜಮಾ!
ಚಿಕ್ಕಮಗಳೂರಿನ ದತ್ತಪೀಠ ರಸ್ತೆಯಲ್ಲಿ ನೂರಾರು ಅಡಿ ಪ್ರಪಾತಕ್ಕೆ ರಸ್ತೆ ಕುಸಿದಿತ್ತು. ಸದ್ಯ ಈಗ ಮುಳ್ಳಯ್ಯನಗಿರಿ, ಇನಾಂ ದತ್ತಪೀಠ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಈ ತಿಂಗಳಿನಿಂದ DL, RC ಯಲ್ಲಿ ಹೊಸ ನಿಯಮ; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ
ಚಾರ್ಮಾಡಿ ಘಾಟಿ ಸೇರಿದಂತೆ ಮುಳ್ಳಯ್ಯನಗಿರಿ, ಪ್ರವಾಸಿತಾಣ ಚಂದ್ರದ್ರೋಣ ಪರ್ವತದ ಸಾಲು, ಮಲೆನಾಡು ಭಾಗದ ಚಿಕ್ಕಮಗಳೂರು, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ಸೇರಿದಂತೆ ಒಟ್ಟು 88 ಪ್ರದೇಶಗಳು ಡೇಂಜರಸ್ ಎಂದು ವರದಿ ನೀಡಿದ್ದು, ಜಿಯೋಲಾಜಿಕಲ್ ಸರ್ವೇ ಸೆಂಥಿಲ್ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಯಲಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ 4,000 ಹಣ ಜಮಾ; ಈ ಜಿಲ್ಲೆಯವರಿಗೆ ಮಾತ್ರ ಮೊದಲು ಬಿಡುಗಡೆ!












