ಚಾರ್ಮಾಡಿ ಘಾಟಿ ಪರಿಸರದ ಬಾರಿಮಲೆಯಲ್ಲಿ ಬೆಂಕಿ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟಿ ಪರಿಸರದ ಚಿಕ್ಕಮಗಳೂರು ಅರಣ್ಯ ಇಲಾಖೆ ವ್ಯಾಪ್ತಿಯ ಬಾರಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಅರಣ್ಯದ ಕಲ್ಲು ಪ್ರದೇಶದಲ್ಲಿ ಒಣಗಿರುವ ಹುಲ್ಲು ಹಾಗೂ ಗಿಡಗಂಟಿಗೆ ಸ್ಥಳೀಯರು ಹಚ್ಚಿರುವ ಬೆಂಕಿ ಪರಿಸರವನ್ನು ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ.

 

ಇದನ್ನೂ ಓದಿ; ರೈತರೇ ಗಮನಿಸಿ; ಈ ದಿನ ಬಿಡುಗಡೆಯಾಗಲಿದೆ ಪಿಎಂ ಕಿಸಾನ್ ಯೋಜನೆಯ 16 ನೇ ಕಂತು

ಕಲ್ಲುಗಳ ಪ್ರದೇಶದಲ್ಲಿ ಬೆಂಕಿ ಇದ್ದು, ಸದ್ಯ ಹತೋಟಿಗೆ ಬಂದಿದೆ. ಅರಣ್ಯದ ಅಂಚಿನವರೆಗೂ ಪಸರಿಸಿದ ಬೆಂಕಿಯನ್ನು ಆರಿಸಲಾಗಿದ್ದು, ಯಾವುದೇ ಅಪಾಯದ ಸ್ಥಿತಿ ಇಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ; ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ; ಹೆಸರು ನೋಂದಾಯಿಸಿಕೊಳ್ಳಲು ಇಲ್ಲಿದೆ ವಿವರ

ಚಾರ್ಮಾಡಿ ಘಾಟಿಯ ವೀಕ್ಷಣಾ ಕೇಂದ್ರದಲ್ಲಿ ನಿಂತು ಗಮನಿಸಿದರೆ ಹಗಲಲ್ಲಿ ದಟ್ಟ ಹೊಗೆ ಆವರಿಸಿರುವುದು ಹಾಗೂ ರಾತ್ರಿ ಸಮಯ ಬೆಂಕಿಯ ಪ್ರಖರತೆ ಎರಡು ದಿನಗಳಿಂದ ಕಂಡು ಬರುತ್ತಿತ್ತು ಎಂದು ವಾಹನ ಸವಾರರು ತಿಳಿಸಿದ್ದಾರೆ. ಕಳೆದ ವರ್ಷ ಘಾಟಿಯ ಕೆಲಭಾಗಗಳಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ಹಲವಾರು ಹೆಕ್ಟೇರ್ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು.

 

ಬಾರಿಮಲೆಯ ಒಂದು ಭಾಗದ ಕಡೆ ಹಳ್ಳ ಇನ್ನೊಂದು ಕಡೆ ಹೊಳೆ ಇದೆ. ಈ ಕಾರಣದಿಂದ ಚಾರ್ಮಾಡಿ ಅರಣ್ಯ ಹಾಗೂ ಇನ್ನೊಂದು ಬದಿಯಲ್ಲಿರುವ ನೆರಿಯ ಮೀಸಲು ಅರಣ್ಯಕ್ಕೆ ಬೆಂಕಿ ಹರಡುವ ಸಾಧ್ಯತೆ ಇಲ್ಲ ಎಂದು ಬೆಳ್ತಂಗಡಿಯ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ವಾತಾವರಣದಲ್ಲಿ ಬದಲಾವಣೆ:
ಘಾಟಿ ಪರಿಸರದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಬೆಳ್ತಂಗಡಿ ತಾಲ್ಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಬೆಳಗಿನ ಜಾವ ಚಳಿ, ಹಗಲಲ್ಲಿ ಉರಿ ಬಿಸಿಲು ವಾತಾವರಣ ಕಂಡುಬಂದಿದೆ. ಚಾರ್ಮಾಡಿ- ಕನಪಾಡಿ ಅರಣ್ಯ, ಕುದುರೆಮುಖ ವನ್ಯಜೀವಿ ವಿಭಾಗ, ಸೋಮೇಶ್ವರ ಅರಣ್ಯ, ನೆರಿಯ ಮೀಸಲು ಅರಣ್ಯ, ಮುಂಡಾಜೆ- ಕಾಪು, ಮುಂಡಾಜೆ – ಧರ್ಮಸ್ಥಳ ಅರಣ್ಯ ಭಾಗಗಳ ಗಡಿಪ್ರದೇಶ ಒಂದಕ್ಕೊಂದು ಸಮೀಪದಲ್ಲಿದೆ. ಇಲ್ಲಿ ಒಂದೆಡೆ ಬೆಂಕಿ ಕಂಡುಬಂದರೂ ಅದು ಹರಡುವ ಸಾಧ್ಯತೆ ಇದೆ. ಬೆಂಕಿ ಪ್ರಕರಣಗಳ ಹತೋಟಿಗೆ ಈಗಾಗಲೇ ವನ್ಯಜೀವಿ ವಿಭಾಗದಿಂದ ಚಾರಣ ಸ್ಥಳಗಳಿಗೆ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಸಿಬ್ಬಂದಿ ಕೊರತೆ ಇದ್ದು, ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಸವಾಲು ಎದುರಾಗಿದೆ. (ವರದಿ- ತನು ಕೊಟ್ಟಿಗೆಹಾರ)

 

ಚಿಕ್ಕಮಗಳೂರು: ಕಾಡಾನೆ ಬಳಿಕ ಕಾಡುಕೋಣಗಳ ಕಾಟ | ಜೀವ ಭಯದಲ್ಲಿ ಗ್ರಾಮಸ್ಥರು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ತಿಂಗಳುಗಳಿಂದ ಜಿಲ್ಲೆಯಾದ್ಯಂತ ಕಾಡಾನೆ ಹಾವಳಿ ಜೋರಾಗಿದ್ದು ಇದರಿಂದ ತೋಟದ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಪಡುತ್ತಿರುವ ಬೆನ್ನಲ್ಲೇ ಇದೀಗ ಕಾಡುಕೋಣಗಳ ಹಿಂಡೊಂದು ಚಿಕ್ಕಮಗಳೂರು ತಾಲೂಕಿನ ಬೆಟ್ಟದಮರಡಿ ಗ್ರಾಮದಲ್ಲಿ ಕಂಡುಬಂದಿದೆ.

 

ಸುಮಾರು ಹದಿನೈದಕ್ಕೂ ಹೆಚ್ಚು ಕಾಡುಕೋಣಗಳು ಕಂಡುಬಂದಿದ್ದು ಗ್ರಾಮಸ್ಥರು ಜೀವ ಭಯದಲ್ಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕಾಡಾನೆ ದಾಳಿಯಿಂದ ಕಂಗೆಟ್ಟ ಜನರು ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿತ್ತು ಇದರ ಜೊತೆಗೆ ಕಾಡುಕೋಣಗಳು ನಾಡಿನತ್ತ ಹೆಜ್ಜೆ ಹಾಕಲಾರಂಭಿಸಿದೆ.

ತೋಟದ ಕೆಲಸ ಹಾಗೂ ಇತರ ಕೆಲಸಗಳಿಗೂ ಹೋಗಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಗ್ರಾಮಸ್ಥರು ಸೇರಿ ಕಾಡುಕೋಣಗಳನ್ನು ಕಡಿಗಟ್ಟುವ ಪ್ರಯತ್ನವನ್ನೂ ಮಾಡಿದ್ದಾರೆ. ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದರು ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ. ಕಾಡು ಪ್ರಾಣಿಗಳ ಹಾವಳಿಗೆ ಬೇಸತ್ತು ಹೋಗುತ್ತಿರುವ ಮಲೆನಾಡು ಭಾಗದ ಜನರು ಕಾಡು ಕೋಣಗಳ ಹಿಂಡನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಮೂಡಿಗೆರೆ: ಮನೆ ಮಾಲೀಕನಿಗೆ ಖಾರದಪುಡಿ ಎರಚಿ ಲಕ್ಷಾಂತರ ಮೌಲ್ಯದ ನಗದು ದರೋಡೆ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ನಾಲ್ವರು ಅಪರಿಚಿತ ಯುವಕರ ತಂಡವೊಂದು ಮನೆ ಮಾಲಿಕನಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಲಾಂಗ್ ಇಟ್ಟು ಮನೆಯಲ್ಲಿದ್ದ ಸುಮಾರು 5 ಲಕ್ಷ ನಗದು, 30 ಗ್ರಾಂ ಮಾಂಗಲ್ಯ ಸರವನ್ನ ಹೊತ್ತೊಯ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ 8 ಗಂಟೆಗೆ ನಡೆದಿದೆ.

ಹೆಬ್ಬಾರಟ್ಟಿ ಅನಂತ ಹೆಬ್ಬಾರ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದ್ದು, ನಾಲ್ವರು ಅಪರಿಚಿತ ಯುವಕರ ತಂಡ ಮನೆಯ ಮೇಲೆ ದಾಳಿ ನಡೆಸಿ ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಮನೆಯಲ್ಲಿದ್ದ ಸುಮಾರು ಐದು ಲಕ್ಷ ನಗದು ಸೇರಿದಂತೆ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ. ಈ ವೇಳೆ ತಡೆಯಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬವರ ಕೈಗೆ ಹರಿತವಾದ ಆಯುಧದಿಂದ ಕೈ ಕಡಿದಿದ್ದಾರೆ. ಈ ವೇಳೆ ಕಾರ್ಮಿಕ ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದ ಜನ ಸೇರುತ್ತಿದ್ದಂತೆ ಮೂವರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಓರ್ವ ಅರಮನೆ ತಲಗೂರು ಎಂಬ ಗ್ರಾಮದ ಅರಣ್ಯದಲ್ಲಿ ಅವಿತು ಕೂತಿದ್ದು, ಸ್ಥಳೀಯರು ಸೇರಿ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದಾಗ ಓರ್ವ ಪತ್ತೆಯಾಗಿದ್ದು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.