ಚಿಕ್ಕಮಗಳೂರು: ಹೆಲ್ಮೆಟ್ ವಿಚಾರಕ್ಕೆ ವಕೀಲನ ಮೇಲೆ ಹಲ್ಲೆ ಪ್ರಕರಣ | ಗಾಯಾಳು ಆರೋಗ್ಯ ವಿಚಾರಿಸಿದ ಸಿ ಟಿ ರವಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹೆಲ್ಮೆಟ್ ಹಾಕದ ಕಾರಣಕ್ಕೆ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ವಕೀಲ ಪ್ರೀತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಿ.ಟಿ ರವಿ ಭೇಟಿ ನೀಡಿ ಪ್ರೀತಮ್ ನ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

 

ಇದನ್ನೂ ಓದಿ; FID ಸರ್ವೆ ನಂಬರ್ ಗಳಿಗೆ ಮಾತ್ರ ಸಿಗಲಿದೆ ಬೆಳೆಹಾನಿ ಪರಿಹಾರ; ನಿಮ್ಮ FID ಗೆ ಎಷ್ಟು ಸರ್ವೆ ನಂಬ‌ರ್ ಜೋಡಣೆ ಆಗಿದೆ; ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಠಾಣೆಯಲ್ಲಿ ಗೂಂಡಾಗಿರಿ ಮಾಡುತ್ತಾರೆ ಅಂದ್ರೆ ಏನರ್ಥ? ಪೊಲೀಸರಿಗೂ ಗೂಂಡಾಗಳಿಗೆ ಏನು ವ್ಯತ್ಯಾಸ?, ವಕೀಲ ಅಂತಾ ಹೇಳಿಕೊಂಡ ಮೇಲೂ ಮನಸ್ಸೋ ಇಚ್ಚೆ ಥಳಿಸುತ್ತಾರೆ. ಹೀಗೆ ಆದ್ರೆ ಜನ ಸಾಮಾನ್ಯರ ಪಾಡೇನು, ಯಾರ ಬಳಿ ಹೋಗಿ ನ್ಯಾಯ ಕೇಳ್ತಾರೆ. ಒಬ್ಬನ ಮೇಲೆ ಆರೇಳು ಜನ ಪೊಲೀಸರು ಹಲ್ಲೆ ಮಾಡಿದ್ದು ಅಕ್ಷಮ್ಯ ಅಪರಾಧ. ಇದು ಗಂಭೀರವಾದ ಪ್ರಕರಣ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾಗರಿಕರ ಜೊತೆ ಹೇಗೆ ಪೊಲೀಸರು ವರ್ತಿಸಬೇಕು, ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಡಬೇಕಾಗಿದೆ.

ಇದನ್ನೂ ಓದಿ; ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ; ಏನಿದು ಎಮರ್ಜೆನ್ಸಿ ಪ್ಯಾನಿಕ್ ಬಟನ್;  ಯಾವ್ಯಾವ ವಾಹನಗಳಿಗೆ ಇದು ಕಡ್ಡಾಯ?, ದರವೆಷ್ಟು?

ಹೆಲ್ಮೆಟ್ ಹಾಕದ್ದೆ ಇದ್ದರೆ ಅವರ ಮೇಲೆ ಕೇಸ್ ಹಾಕಲು ಹಲವು ದಾರಿಗಳಿವೆ ಅದನ್ನು ಬಿಟ್ಟು ಮನಸ್ಸೋ ಇಚ್ಚೆ ಹಲ್ಲೆ ಮಾಡುವುದು ಅಲ್ಲ. ಇದು ಗಂಭೀರವಾದ ಪ್ರಕರಣ ಈ ಬಗ್ಗೆ ಗೃಹ ಸಚಿವರಿಗೆ ಹಾಗೂ ಪೊಲೀಸ್ ವರಿಷ್ಠರಿಗೆ ಆಗ್ರಹ ಮಾಡುತ್ತೇನೆ. ಇದರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು.

 

ಇದನ್ನೂ ಓದಿ; ಸೆಂಟ್‌ ಬ್ಯಾಂಕ್‌ ನಲ್ಲಿ ಉದ್ಯೋಗ; 60 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾಂಗ್ರೇಸ್ ಗೆದ್ದ ತಕ್ಷಣ ಕಾನೂನು ಬದಲಾಗುವುದಿಲ್ಲ:
20 ವರ್ಷ ರಾಜಕೀಯದಿಂದ ಪೊಲೀಸ್ ವ್ಯವಸ್ಥೆಯನ್ನು ದೂರ ಇಟ್ಟಿದೆ. ಪೊಲೀಸ್ ಇಲಾಖೆ ಮೇಲೆ ರಾಜಕೀಯ ಪ್ರಭಾವ ಬೀರದ ಹಾಗೆ ನೋಡಿಕೊಂಡಿದ್ದೇ. ಈಗ ಕಾಂಗ್ರೆಸ್ ಗೆದ್ದ ತಕ್ಷಣ ಇಲಾಖೆ ಕಾನೂನುಗಳು ಬದಲಾಗುವುದಿಲ್ಲ. ಮಾನಸಿಕತೆ ಬದಲಾಗುವುದಿಲ್ಲ, ಬದಲಾಗಿದ್ದು, ದುರಾದೃಷ್ಟಕರ. ಸಮಾಜ ತಿರುಗಿ ಬಿದ್ದರೆ ಇದು ಯಾವ ಲೆಕ್ಕಕ್ಕಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

 

ಚಿಕ್ಕಮಗಳೂರು: ಬ್ಯಾಂಕ್ ಸಿಬ್ಬಂದಿಗಳಿಂದಲೇ ಗ್ರಾಹಕರಿಗೆ ವಂಚನೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬ್ಯಾಂಕ್ ಸಿಬ್ಬಂದಿಗಳೇ ಗ್ರಾಹಕರಿಗೆ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇಗುಲ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ.

ಗ್ರಾಹಕರ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾರೆ. ಬೆಂಗಳೂರು ಮುಖ್ಯ ಶಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. 141 ಚಿನ್ನದ ಪ್ಯಾಕೆಟ್ ಗಳ ಪೈಕಿ 140 ಪ್ಯಾಕೆಟ್ ಗಳಲ್ಲಿ ನಕಲಿ ಚಿನ್ನ ಪತ್ತೆಯಾಗಿವೆ. ಬ್ಯಾಂಕ್ ಆಡಿಟ್ ನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಬಹಿರಂಗವಾಗಿದೆ.

ಗ್ರಾಹಕರ ಚಿನ್ನವನ್ನು ಮಾರಾಟ ಮಾಡಿರುವ ಸಿಬ್ಬಂದಿ:
ಆರೋಪಿಗಳು ಮೊದಲಯೇ ನಕಲಿ ಚಿನ್ನವನ್ನು ತಂದು ಇಟ್ಟುಕೊಂಡಿದ್ದರು. ಗ್ರಾಹಕರಿಂದ ಅಸಲಿ ಚಿನ್ನವನ್ನು ಪಡೆದು ಸಾಲ ನೀಡುತ್ತಿದ್ದರು. ಆದರೆ ಲಾಕರ್ ನಲ್ಲಿ ಇಡುವಾಗ ಅಸಲಿ ಚಿನ್ನದ ಬದಲು ನಕಲಿ ಚಿನ್ನವನ್ನು ಇಡುತ್ತಿದ್ದರು. ಬಳಿಕ ಅಸಲಿ ಚಿನ್ನವನ್ನು ಬೇರೆ ಕಡೆ ಮಾರುತ್ತಿದ್ದರು ಎನ್ನಲಾಗಿದೆ.

ಪತ್ನಿ ಹೆಸರಿನಲ್ಲಿ ನಕಲಿ ಚಿನ್ನವಿಟ್ಟು ಲಕ್ಷಾಂತರ ರೂಪಾಯಿ ಲೋನ್:
ಬ್ಯಾಂಕ್ ಮ್ಯಾನೇಜರ್ ಸಂದೀಪ್ ಮತ್ತು ಸಿಬ್ಬಂದಿ ನಾರಾಯಣಸ್ವಾಮಿ ಪತ್ನಿ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ಮ್ಯಾನೇಜರ್ ಸಂದೀಪ್ ಪತ್ನಿ ಶ್ವೇತಾ ಹೆಸರಲಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದ್ದಿದ್ದನು. ಇದೇ ರೀತಿಯಾಗಿ ನಾರಾಯಣಸ್ವಾಮಿ ಕೂಡ ಪತ್ನಿ ಲಾವಣ್ಯ ಹೆಸರಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 50 ಲಕ್ಷ ರೂ. ಸಾಲ ಪಡೆದಿದ್ದನು.

ಮ್ಯಾನೇಜರ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲು:
ಇನ್ನು ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸಂದೀಪ್, ಪ್ರಶಾಂತ್, ನಾರಾಯಣಸ್ವಾಮಿ, ಶ್ವೇತಾ, ಲಾವಣ್ಯ ಎಸ್ಕೇಪ್ ಆಗಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.