ಮೂಡಿಗೆರೆ: ಅರಣ್ಯ ರಕ್ಷಕ ಮೋಸಿನ್ ಗೆ ಮುಖ್ಯಮಂತ್ರಿ ಪದಕ

ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ಭಾರತೀಬೈಲ್ ವಲಯದ ಅರಣ್ಯ ರಕ್ಷಕ ಮೋಸಿನ್ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬ್ಯಾಂಕ್ವಿಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಇನ್ನೂ ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಶು ವೈದ್ಯರ ಸೇವೆ

2021-22 ಸಾಲಿನಲ್ಲಿ ನೀಡಬೇಕಾಗಿದ್ದ ಮುಖ್ಯಮಂತ್ರಿ ಪದಕವನ್ನು ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಿದ ಗಣ್ಯರಿಗೆ ವಿಧಾನ ಸೌದದ ಬ್ಯಾಂಕ್ವಿಟ್ ಹಾಲ್ ನಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಿದರು.

 

ಇದನ್ನೂ ಓದಿ; ಡಾ. ಬ್ರೋ ವೀಡಿಯೋ ಬ್ಯಾನ್ ಮಾಡಿದ ಯೂಟ್ಯೂಬ್

ಅರಣ್ಯ ರಕ್ಷಕ ಮೋಸಿನ್ ಅವರು 12 ವರ್ಷಗಳ ಕಾಲ ವನ್ಯ ಸಂರಕ್ಷಣಾ ಕಾರ್ಯದಲ್ಲಿ ಉತ್ತಮ ಸೇವೆ ನೀಡಿದ್ದು ಐದು ವರ್ಷ ಮುತ್ತೋಡಿ ಅರಣ್ಯ ಭಾಗದಲ್ಲಿ ಸೇವೆ ನೀಡಿ ನಂತರ ಅಲ್ಲಿಂದ ವರ್ಗಾವಣೆಯಾಗಿ ಎರಡು ವರ್ಷ ಬಿದರಹಳ್ಳಿ ಭಾಗದಲ್ಲಿ ಸೇವೆ ನೀಡಿದರು. ಈಗ ಪ್ರಸ್ತುತ ಭಾರತೀಬೈಲ್ ಅರಣ್ಯ ಭಾಗದಲ್ಲಿ ಉತ್ತಮ ಅರಣ್ಯ ರಕ್ಷಕರಾಗಿ ಸೇವೆ ನೀಡುತ್ತಿರುವ ಮೋಸಿನ್ ಅವರಿಗೆ ಈ ಗೌರವ ಸಂದಿದೆ.

 

ಬಿ.ಹೊಸಹಳ್ಳಿ ಅರಣ್ಯ ಭಾಗದಲ್ಲಿ ಅರಣ್ಯ ಉತ್ಪನ್ನ ಕಳ್ಳತನ ಪ್ರಕರಣ, ಅಕ್ರಮ ಮರ ಕಡಿತಲೆ ಪ್ರಕರಣಗಳನ್ನು ಭೇದಿಸಿದ್ದಾರೆ. ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ, ಜಿಂಕೆ ಕೊಂಬು ಮತ್ತಿತರ ವಸ್ತುಗಳನ್ನು ಕಳ್ಳರಿಂದ ವಶಪಡಿಸಿಕೊಂಡು ಪ್ರಾಮಾಣಿಕತೆಯ ಸೇವೆ ನೀಡಿದ್ದಾರೆ. ಮೂಡಿಗೆರೆ ವ್ಯಾಪ್ತಿಯಲ್ಲಿ ಅಕ್ರಮ ಬೀಟೆ ಮರ ಅಕ್ರಮ ದಾಸ್ತಾನು ಪತ್ತೆ ಹಚ್ಚಿ ಸೇವೆ ನೀಡಿರುವುದು. 2021-22 ಸಾಲಿನಲ್ಲಿ ಸ.ನಂ256 ರಲ್ಲಿ ೫೦ಹೆಕ್ಟೇರ್ ಹಾಗೂ ಸನಂ. 212ರಲ್ಲಿ 50 ಹೆಕ್ಟೇರ್ ಮುಂಗಡ ಕಾಮಗಾರಿಯ ಕೆಲಸ ಕಾರ್ಯಗಳನ್ನು ದಕ್ಷತೆಯಿಂದ ನಿರ್ವಹಣೆ ಮಾಡಿದ್ದಾರೆ.

ಅರಣ್ಯ ಇಲಾಖೆಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 7 ಬಾರಿ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಆಯ್ಕೆಯಾಗಿ 2 ಬಾರಿ ಕಂಚಿನ ಪದಕ ಪಡೆದಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಇವರಿಗೆ ಸಂದಿದೆ. ಈ ಪ್ರಶಸ್ತಿ ನೀಡಲು ಕಾರಣೀಕರ್ತರಾದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅರಣ್ಯ ರಕ್ಷಕ ಮೋಸಿನ್ ಅಭಿನಂದನೆ ಸಲ್ಲಿಸಿದ್ದಾರೆ.

ಶೃಂಗೇರಿ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

 

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಸುರಕ್ಷಾ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಹಬ್ಬಕ್ಕೆ ಮನೆಗೆ ತೆರಳಿದ್ದಾಗ ಪಾಲಕರು ಬುದ್ದಿವಾದ ಹೇಳಿದ್ದಾರೆ. ಇದರಿಂದ ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶೃಂಗೇರಿಯಲ್ಲಿ ದ್ವಿತೀಯ ಬಿ.ಕಾಮ್ ವ್ಯಾಸಂಗ ಮಾಡುತಿದ್ದ, ಅವರು ಸಚ್ಚಿದಾನಂದಪುರದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಉಳಿದು ಕಾಲೇಜಿಗೆ ತೆರಳುತ್ತಿದ್ದರು. ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋದಾಗ ಮನೆಯಲ್ಲಿ ವಿಷ ಸೇವಿಸಿದ್ದಾಳೆ. ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.