ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾಗರಾಜ್ ದಿಢೀರ್ ಎತ್ತಂಗಡಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಎನ್.ಎಂ. ನಾಗರಾಜ್ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಅವರ ಸ್ಥಾನಕ್ಕೆ ಭಂವ‌ರ್ ಸಿಂಗ್ ಮೀನಾ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ.

ಎನ್.ಎಂ. ನಾಗರಾಜ್ ಅವರು ಕೇವಲ ನಾಲ್ಕೂವರೆ ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2026ರ ಜನವರಿ 1ರಂದು ಡಿಸಿಯಾಗಿ ಪದಗ್ರಹಣ ಮಾಡಿದ್ದ ಅವರು, ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಅವರಿಗೆ ಸವಲಾಗಿತ್ತು. ಮರು ಮತ ಎಣಿಕೆ ನಡೆದ 17 ದಿನಗಳಲ್ಲಿ ಅವರ ವರ್ಗಾವಣೆಯಾಗಿದೆ. ಇತ್ತೀಚೆಗೆ ರೈತರ ಪ್ರತಿಭಟನೆ ವೇಳೆ ಲಾಠಿಚಾರ್ಜ್ ನಡೆದ ಪ್ರಕರಣದಲ್ಲಿ ಎನ್.ಎಂ. ನಾಗರಾಜ್ ಅವರು ನಗುವ ವಿಡಿಯೋ ವೈರಲ್‌ ಆಗಿತ್ತು. ಈ ನಡೆಯಿಂದ ಹಲವು ರೈತರ ಆಕ್ರೋಶಕ್ಕೆ ಕಾರಣವಾಗಿದ್ರ. ಇದೀಗ ವರ್ಗಾವಣೆಯಾದ ಎನ್.ಎಂ. ನಾಗರಾಜ್ ಅವರಿಗೆ ಕರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿಯ ಒಂಬಡ್ಸ್‌ಮನ್ ಹುದ್ದೆ ನೀಡಲಾಗಿದೆ.

ಇನ್ನೊಂದೆಡೆ, ಭಂವರ್ ಸಿಂಗ್ ಮೀನಾ ಅವರು ಈವರೆಗೆ ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.