ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆಯಿಂದ ದಿಡುಪೆ ಕಡೆ ದಟ್ಟ ಅರಣ್ಯದ ರಸ್ತೆಯಲ್ಲಿ ಮಧ್ಯರಾತ್ರಿ ಹೊತ್ತಿಗೆ ಬರುತ್ತಿದ್ದ ವೃದ್ಧೆಯೊಬ್ಬರನ್ನು ಅರಣ್ಯ ಇಲಾಖೆ ರಕ್ಷಿಸಿ ಮನೆಯವರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ; ರೇಷನ್ ಕಾರ್ಡ್ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ

ಸುಮಾರು 70 ವರ್ಷ ಪ್ರಾಯದ ಮಹಿಳೆಯೊಬ್ಬರು ಮಾನಸಿಕ ಅಸೌಖ್ಯದಿಂದ ಬಳಲುತ್ತಿದ್ದು, ಮನೆಯವರ ಗಮನಕ್ಕೆ ಬರದೆ ಸೋಮವಾರ ಸಂಜೆ ಮನೆಯಿಂದ ಕಾಣೆಯಾಗಿದ್ದರು. ಸಂಸೆಯಿಂದ ದಿಡುಪೆಗೆ ಸಂಪರ್ಕ ಇರುವ ಕಾಡು ರಸ್ತೆಯಲ್ಲಿ ರಾತ್ರಿ 11:30 ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದವರಿಗೆ ಕಂಡುಬಂದಿದ್ದಾರೆ. ತಕ್ಷಣ ಬೈಕ್ ಸವಾರರು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಸ್ಥಳಕ್ಕೆ ತೆರಳಿದ ವನ್ಯಜೀವಿ ವಿಭಾಗದ ಡಿ.ಆರ್.ಎಫ್.ಒ ರಂಜಿತ್ ಕುಮಾರ್ ಮತ್ತು ಸಿಬ್ಬಂದಿ ಭರತ್ ಹಾಗೂ ಸ್ಥಳೀಯರ ಸಹಕಾರದಲ್ಲಿ ವೃದ್ಧೆಯನ್ನು ಕರೆತಂದ ಬಳಿಕ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಮನೆಯವರ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ; ಮಹಿಳೆಯರಿಗೆ ಬಂಪರ್ ಸುದ್ದಿ; ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸೋಲಾರ್ ಸ್ಟವ್!; ಈ ದಾಖಲೆ ಕಡ್ಡಾಯ
ಇನ್ನು ಈ ಭಾಗದಲ್ಲಿ ಆನೆ, ಚಿರತೆ ಮೊದಲಾದ ವನ್ಯಮೃಗಗಳು ತಿರುಗಾಟ ನಡೆಸುವ ದಿಡುಪೆ -ಸಂಸೆ ರಸ್ತೆ ರಾತ್ರಿ ವೇಳೆ ಹೆಚ್ಚು ಅಪಾಯಕಾರಿ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ತುರ್ತು ಸ್ಪಂದನೆಯಿಂದ ವೃದ್ಧೆ ಯಾವುದೇ ಅಪಾಯಕ್ಕೆ ಸಿಲುಕದೆ ಮನೆ ಮಂದಿಯನ್ನು ಸೇರಿದ್ದಾರೆ.













