ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ Anchor Arun Badiger | ಕಾಲೆಳೆದ ನೆಟ್ಟಿಗರು

ಇಸ್ರೋ ವಿಜ್ಞಾನಿಗಳ ಹಾಗೂ ಇಡೀ ವಿಶ್ವದ ಕಣ್ತಪ್ಪಿಸಿ ನಮ್ಮ ಕರ್ನಾಕದ ಮಾಧ್ಯಮಗಳು ಚಂದ್ರನ ಮೇಲೆ ಅದಾಗಲೇ ಕಾಲಿಟ್ಟಾಗಿದೆ.

ನಿಮಗೆ ಆಶ್ಚರ್ಯ ಅನ್ಸಿದ್ರು ಇದೊಂತರ ಸತ್ಯ. ಇದು VFX ಹಾಗೂ ಗ್ರಾಫಿಕ್ಸ್ ನ ಯುಗ. ಇಲ್ಲಿ ಇದ್ದ ವಸ್ತುವನ್ನು ಮಾಯ ಮಾಡಿಸಬಹುದು. ಇಲ್ಲದೇ ಇರುವ ವಸ್ತುವನ್ನು ಸೃಷ್ಟಿ ಮಾಡಬಹುದು. ಆದ್ರೆ ನಮ್ಮ ಕನ್ನಡದ ನ್ಯೂಸ್ ಚಾನೆಲ್ ಗಳು ಈ ವಿಚಾರದಲ್ಲಿ ಎತ್ತಿದ ಕೈ. ಪ್ರತಿಯೊಂದು ಸುದ್ದಿಯನ್ನು ವೀಕ್ಷಕರಿಗೆ ಅರ್ಥಪೂರ್ಣವಾಗಿ ತಿಳಿಸೋ ಉದ್ದೇಶದಿಂದ ಹತ್ತಾರು ವಿಭಿನ್ನ ಪ್ರಯತ್ನ ಮಾಡುತ್ತಿರುತ್ತವೆ. ಇದೀಗ ಏಷ್ಯಾನೆಟ್ ಸುವರ್ಷ ನ್ಯೂಸ್ ಹಾಗೂ ಪಬ್ಲಿಕ್ ಟಿವಿ ಮಾಡಿರುವ ಗ್ರಾಫಿಕ್ಸ್ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಚಂದ್ರನ ಮೇಲೆ ನಿಂದ ಆ್ಯಂಕರ್

ಚಂದ್ರಯಾನದ ಕುರಿತಂತೆ ಮಾಡಿರುವ ಕಾರ್ಯಕ್ರಮವೊಂದರಲ್ಲಿ ಪಬ್ಲಿಕ್ ಟಿವಿ ಆ್ಯಂಕರ್ ಅರುಣ್ ಬಡಿಗೇರ್ ಹಾಗೂ ಸುವರ್ಣ ನ್ಯೂಸ್ ನ ಭಾವನ ಚಂದ್ರನ ಮೇಲೆ ನಿಂತಿರುವಂತೆ ಮಾಡಿರುವ ಗ್ರಾಫಿಕ್ಸ್ ಈಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಕುರಿತು ಕೆಲವರು ‘ಚಂದ್ರನ ಮೇಲೆ ಮೊದಲು ಕಾಲಿಟ್ಟಿದ್ದು ನಮ್ಮ ಅರುಣ್ ಬಡಿಗೇರ್ ಹಾಗೂ ಭಾವನಾ’ ಎಂದು ಕಾಲೆಳಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.