
C.T Ravi: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮೋದಿ ಭೇಟಿ ವೇಳೆ, ಬಿಜೆಪಿ ಶಾಸಕರ ಬಗ್ಗೆ ಟ್ವಿಟ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಹಿನ್ನೆಲೆ ನಗರದಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಚಂದ್ರಯಾನ 140 ಕೋಟಿ ಜನರಿಗೆ ಸೇರಿದ್ದು ಎಂದು ಪ್ರಧಾನಿಯೇ ಹೇಳಿದ್ದಾರೆ. 140 ಕೋಟಿಯಲ್ಲಿ ಕಾಂಗ್ರೆಸ್ ಇದೆ ಎಂದು ಭಾವಿಸಿದ್ದೇನೆ ಇಲ್ಲ ಎಂದುಕೊಂಡರೆ ಅದು ಅವರ ದುರ್ದೈವಿ ಎಂದು ಸಿ.ಟಿ.ರವಿ ಹೇಳಿದರು.
ಇದನ್ನೂ ಓದಿ; ಶೃಂಗೇರಿ: ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಮರ ಕಡಿತ?; ಕಾರ್ಯಾಚರಣೆಗಿಳಿದ ವನ್ಯಜೀವಿ ಸಂರಕ್ಷಣಾ ಇಲಾಖೆ

ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಅವರು ಇದ್ದಾರೆ ಎಂದು ಅಂದುಕೊಂಡಿದ್ದೇವೆ, ಅವರ್ಯಾಕೆ ನಾವಿಲ್ಲ ಎಂದುಕೊಳ್ಳುತ್ತಾರೆ, ನನಗೆ ಅರ್ಥವಾಗದ ಸಂಗತಿ ಜನರ ಜೊತೆ ಇರುವುದು ನಮಗೆ ಸಂತೋಷ ತರುವ ಸಂಗತಿ, ಜನಸಾಮಾನ್ಯರ ಜೊತೆ ಇರುವುದು ಕಾಂಗ್ರೆಸಿಗರಿಗೆ ಅಪರಾಧ ಅನ್ಸುತ್ತೆ, ಕಾಂಗ್ರೆಸ್ ಗರಿಗೆ ಜನಸಾಮಾನ್ಯರ ಜೊತೆ ಇದ್ದರೆ ಕೀಳಮೆಯ ಭಾವನೆ ಬರುತ್ತದೆ. ಕಾಂಗ್ರೆಸ್ಸಿಗರು ವಡ್ಡೋಲಗದ ಮೂಲಕ ತಮ್ಮನ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದರು.

ಚಂದ್ರಯಾನ-3 ಬಗ್ಗೆ ದೇಶವೇ ಸಂಭ್ರಮಿಸಿದೆ, ಒಂದು ಪಕ್ಷಕ್ಕೆ ಸೀಮಿತವಾದದ್ದುದ್ದಲ್ಲ ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ನಮ್ಮವರು ಜನರ ಜೊತೆ ಇದ್ದು ಪ್ರಧಾನಿಯನ್ನ ಸ್ವಾಗತಿಸಿದ್ದಾರೆ ಪ್ರಧಾನಿ ನೇತೃತ್ವದಲ್ಲಿ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುತ್ತಿದೆ ಎಂದು ಹೇಳಿದರು.
ಬಿಜೆಪಿಗರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ, ಸಿ.ಟಿ ರವಿ (C.T Ravi: ) ಹೇಳಿದ್ದೇನು?
ಯಾರಾದರೂ ಪಕ್ಷ ತೊರೆದು ಬಂದರೆ ಹಿಂದಿನ ಬೆಂಚ್ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿಗರು ಗೌರವದಿಂದ ಕರೆಯುತ್ತಿಲ್ಲ, ಗೌರವ ಇಲ್ಲದ ಜಾಗಕ್ಕೆ ಏಕೆ ಹೋಗಬೇಕು. ಗೌರವ ಇಲ್ಲದ ಜಾಗಕ್ಕೆ ಯಾರೂ ಹೋಗಲ್ಲ ಅನ್ನೋದು ನನ್ನ ನಂಬಿಕೆ ಹೋದರೆ ನಾವು ಯಾವ ಪರಿಸ್ಥಿತಿಯನ್ನ ಬೇಕಾದರೂ ಎದುರಿಸುತ್ತೇವೆ ಎಂದರು.
ಇದನ್ನೂ ಓದಿ; ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ
ನಾವು ಯಾರನ್ನು ಕಳಿಸುವ ಪ್ರಯತ್ನ ಮಾಡಲ್ಲ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ
ಕೆಲವರು ನನ್ನನ್ನ ಕಳಿಸಲು ನೋಡುತ್ತಿದ್ದಾರೆ ಎಂದಿದ್ದಾರೆ. ನಾನು ಅದೇ ದಾಟಿಯಲ್ಲಿ ಉತ್ತರಿಸಿದ್ರೆ, ಕಳಿಸೋಕೆ ನೋಡ್ತಿದ್ದೇವೆ ಅನ್ನಿಸುತ್ತೆ. ನಾವು ಯಾರನ್ನು ಕಳಿಸುವ ಪ್ರಯತ್ನ ಮಾಡಲ್ಲ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಉಳಿಯೋದು-ಹೋಗೋದು ಅವರಿಗೆ ಬಿಟ್ಟದ್ದು ಅವರು ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ, ಅಪಾರ್ಥವಾಗೂ ಕಲ್ಪಿಸೋಲ್ಲ ಯಾವುದೇ ಪರಿಸ್ಥಿತಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಕಾರ್ಯಕರ್ತರ ಬಲದ ಮೂಲಕ ಪಕ್ಷ ಕಟ್ಟಿದ್ದೇವೆ, ಕಾರ್ಯಕರ್ತರಿಂದಲೇ ಎಲ್ಲವನ್ನು ಎದುರಿಸುತ್ತೇವೆ ಎಂದರು.
ಅಕ್ರಮ ಭೂ ಮಂಜೂರು ರೂವಾರಿ ಉಮೇಶ್ ಅಮಾನತು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನವಾಗಿರುವ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಆಗಿದ್ದ ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶಿಸಿದ್ದಾರೆ. ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಆಗಿ ಇತ್ತೀಚೆಗೆ ವರ್ಗಾವಣೆಗೊಂಡು ಕಾರವಾರ ಸೀಬರ್ಡ್ ಭೂಸ್ವಾಧೀನ ಅಧಿಕಾರಿಯಾಗಿದ್ದ ಉಮೇಶ್ ಅವರ ಮೇಲೆ ಅಕ್ರಮ ಭೂ ಮಂಜೂರಾತಿ ಸಂಬಂಧ ತರೀಕೆರೆ ಉಪವಿಭಾಗಾಧಿಕಾರಿ ಡಾ|ಕಾಂತರಾಜ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟ ಆರೋಪ ಕೇಳಿ ಬಂದ ಹಿನ್ನಲೆ ಉಮೇಶ್ ಬಂಧನಕ್ಕೆ ಪೊಲೀಸರ ನಾಲ್ಕು ತಂಡ ರಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲೇ ಪ್ರಮುಖ ಆರೋಪಿಯಾಗಿದ್ದ ಉಮೇಶ್ ನನ್ನು ಬೆಂಗಳೂರಿನ ಪೀಣ್ಯ ಬಳಿ ಪೊಲೀಸರು ಬಂಧನ ಮಾಡಿದ್ದರು. ಬಂಧನದ ಹಿನ್ನಲೆ ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶಿಸಿದ್ದಾರೆ.














