
ಶೃಂಗೇರಿ ತಾಲ್ಲೂಕು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ವಾರ್ಷಿಕ ಕನಿಷ್ಠ 50 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ ಸ್ವಚ್ಚತೆ ಒಂದು ಸವಾಲಿನ ಕೆಲಸವಾಗಿದೆ. ಆದರೆ ಇಲ್ಲಿ ಕೇವಲ 13 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 2 ನೌಕರರು ಮಾತ್ರ ಖಾಯಂ ನೌಕರರಾಗಿದ್ದು ಉಳಿದವರಿಗೆ ಇದುವರೆಗೂ ಖಾಯಮಾತಿ ಆಗಿರುವುದಿಲ್ಲ.
ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 8000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ

ಈ ಕುರಿತು ಕಳೆದ ಕೆಲವು ವರ್ಷಗಳಿಂದ ಪೌರ ಕಾರ್ಮಿಕರು ನಿರಂತರವಾಗಿ ಖಾಯಮಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ, ಕಳೆದ ಬಾರಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾಗ ಮಾನ್ಯ ಶಾಸಕರು ಹಾಗೂ ಅಧಿಕಾರಿಗಳ ಲಿಖಿತ ಭರವಸೆ ಮೇರೆಗೆ(2 ತಿಂಗಳ ಒಳಗಾಗಿ ಖಾಯಮಾತಿ ಮಾಡುವುದಾಗಿ) ಹೋರಾಟ ಕೈ ಬಿಟ್ಟಿದ್ದರು. ಈಗ ಸುಮಾರು 6 ತಿಂಗಳಾದರೂ ಭರವಸೆಯನ್ನು ಈಡೇರಿಸಿಲ್ಲ ಆದ್ದರಿಂದ ಮತ್ತೆ ಮುಷ್ಕರ ನಡೆಸುತ್ತಿದ್ದಾರೆ.

ಪ್ರಸ್ತುತ ಎಲ್ಲೆಡೆ ಡೆಂಗ್ಯೂ ಮಹಾಮಾರಿ ಹರಡುತ್ತಿದ್ದು, ಶೃಂಗೇರಿ ತಾಲೂಕು ಚಿಕ್ಕಮಗಳೂರು ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದ್ದು ಜನರು ಭಯದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡದಿದ್ದಲ್ಲಿ ಡೆಂಗ್ಯೂ ಕಾಯಿಲೆ ಮತ್ತಷ್ಟು ಹೊರಡುವ ಸಾಧ್ಯತೆ ಇದ್ದು, ತಕ್ಷಣವೇ ಪೌರ ಕಾರ್ಮಿಕರ ನ್ಯಾಯಯುತವಾದ ಬೇಡಿಕೆಗೆ ಸ್ಪಂದಿಸಿ ನ್ಯಾಯ ಒದಗಿಸಿ ಈ ಸಮಸ್ಯೆಗಳನ್ನು ಬಗೆಹರಿಸಬೇಕು.
ಇದನ್ನೂ ಓದಿ: 10th ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಇವರ ಹೋರಾಟಕ್ಕೆ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ.

ನೌಕರರ ಬೇಡಿಕೆಗಳು ಇಂತಿವೆ:
⏩ ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರನ್ನು ತಕ್ಷಣದಲ್ಲಿ ಖಾಯಂ ಮಾಡಲು ಕ್ರಮ ವಹಿಸಬೇಕು
⏩ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಹಾಲಿ 14 ಜನ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು ಇನ್ನು 06 ಜನ ಪೌರ ಕಾರ್ಮಿಕರನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಬೇಕು
⏩ಖಾಲಿ ಇರುವ ಡ್ರೈವರ್ ಹುದ್ದೆಯನ್ನು ಖಾಯಂಗೊಳಿಸಬೇಕು
⏩ ಖಾಲಿ ಇರುವ ನೀರು ಸರಬರಾಜು ನೌಕರರ ಹುದ್ದೆಯನ್ನು ಖಾಯಂಗೊಳಿಸಬೇಕು
ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಪೌರ ಕಾರ್ಮಿಕರೊಂದಿಗೆ ಧರಣಿಯಲ್ಲಿ ಭಾಗವಹಿಸಿ ನಂತರದಲ್ಲಿ ಶೃಂಗೇರಿ ತಾಲ್ಲೂಕು ದಂಡಾಧಿಕಾರಿಗಳಿಗೆ ಅಧಿಕಾರಿಗಳ ಮುಖೇನ ಮನವಿ ಸಲ್ಲಿಸಲಾಯಿತು, ಹಾಗೆಯೇ ಪ್ರಧಾನಿ ಕಾರ್ಯಾಲಯ, ಪೌರಾಡಳಿತ ಸಚಿವರು, ಮುಖ್ಯಮಂತ್ರಿಗಳಿಗೂ ಪತ್ರ ಮುಖೇನ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆದರ್ಶ, ರಂಜಿತ್, ನಿರಂಜನ್, ಅಶ್ವಿನ್ , ಪ್ರವೀಣ್, ಗಿರಿಜಾ ಪ್ರಸಾದ್, ಪ್ರವೀಣ್ ಕಾಳಿಕಾಂಬಾ ಇದ್ದರು.

ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಚಿಕ್ಕಮಗಳೂರು: ಬಿಜೆಪಿ ಫಲಾನುಭವಿ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರಾಗಿ ಪ್ರವೀಣ್ ಖಾಂಡ್ಯ ನೇಮಕ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಕ್ಷದ ಫಲಾನುಭವಿ ಪ್ರಕೋಷ್ಟದ ರಾಜ್ಯ ಸಮಿತಿಯ ಸದಸ್ಯರನ್ನಾಗಿ ಶ್ರೀ ಪ್ರವೀಣ್ ಕುಮಾರ್ (ಖಾಂಡ್ಯ) ಅವರನ್ನು ನಿಯುಕ್ತಿ ಮಾಡಿ ಆದೇಶಿಸಲಾಗಿದೆ.
ಫಲಾನುಭವಿ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಪ್ರಸನ್ನ ನಾಯ್ಕ ಅವರು ಆದೇಶ ಪತ್ರವನ್ನು ಹಸ್ತಾಂತರ ಮಾಡುವ ನೂತನ ಜವಾಬ್ದಾರಿಯನ್ನು ಘೋಷಿಸಿದರು.
ಪ್ರವೀಣ್ ಖಾಂಡ್ಯ ಈ ಹಿಂದೆ ಬಜರಂಗದಳದ ರಾಜ್ಯ ಮಟ್ಟದ ಮುಖಂಡರಾಗಿ ಜವಾಬ್ದಾರಿ ನಿರ್ವಹಿಸಿದ್ದರು, ಕಳೆದ ಎರಡು ಚುನಾವಣೆಯಿಂದ ಬಿಜೆಪಿ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಂಕರ ಭಾರತಿ ಎಂಬ ಗೋಶಾಲೆಯನ್ನು ಸಹ ನಡೆಸುತ್ತಿದ್ದಾರೆ.













