ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡ ಭಾಗದ ಅದ್ದೂರಿ ಬಯಲಾಟವಾಗಿ ಟ್ರೆಂಡ್ ಸೆಟ್ ಮಾಡಿರುವ ಆಟ ಆಲಕ್ಕಿ ಯಕ್ಷೋತ್ಸವ ಈ ಬಾರಿ ಮತ್ತಷ್ಟು ಮೆರುಗು ತುಂಬಿಕೊಂಡು ಸಜ್ಜಾಗುತ್ತಿದೆ. ಕೊಪ್ಪ ತಾಲ್ಲೂಕು (ಮೇಗೂರು ಸಮೀಪ) ಹೆಗ್ಗಾರು ಗ್ರಾಮದ ಆಲಕ್ಕಿ ವಿಶಾಲ ಮೈದಾನದಲ್ಲಿ ಇದೇ ನಾಳೆ ಅಂದರೆ ಬುಧವಾರ 24, ಡಿಸೆಂಬರ್, 2025ರಂದು ನಡೆಯಲಿದೆ.

ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಯಾವುದೇ ಟಿಕೇಟ್ ಆಟಗಳಿಗೆ ಕಡಿಮೆ ಇಲ್ಲದಂತ ಸಂಯೋಜನೆ ಮತ್ತು ಸಂಘಟನೆ ಈ ಆಲಕ್ಕಿಯಕ್ಷೋತ್ಸವ ಮಲೆನಾಡ ಮಡಿಲಲ್ಲಿರುವ ಮೇಗೂರಿನ ವಿಶಾಲವಾದ ಆಲಕ್ಕಿಯ ಬಯಲಿನಲ್ಲಿ – ತೃತೀಯ ಯಕ್ಷೋತ್ಸವೂ ಗಾನಸಾರಥಿ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯರ ರಂಗ ಸಾರಥ್ಯದಲ್ಲಿ ತ್ರಿವಳಿ ಪ್ರಸಂಗಗಳ ಪ್ರದರ್ಶನ- ತ್ರಿವಳಿ ಭಾಗವತರ ಗಾನಸುಧೆ, ವಿಶೇಷ ಆಕರ್ಷಣೆಯಾಗಿ ಅಭ್ಯಾಗತ ಕಲಾವಿದರ ಅಪೂರ್ವ ಸಮಾಗಮದಲ್ಲಿ ಸರ್ವ ಸಮರ್ಥ ಮೇಳದ ಕಲಾವಿದರ ಅಮೋಘ, ಅದ್ಭುತ ರಂಗನಿರ್ವಹಣಾ ವೈಖರಿಯ ಆಸ್ವಾದಿಸುವ, ಅನುಭವಿಸುವ, ಆನಂದಿಸುವ ವಿಶೇಷ ಸ೦ಭ್ರಮವೇ ಸರಿ.

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಸುತ್ತ ಕಾನನದ ಮಧ್ಯೆ ಅದ್ದೂರಿ ರಂಗ ಸಜ್ಜಿಕೆ. ಹೋಟೆಲ್ ವ್ಯವಸ್ಥೆ, ನೂರಾರು ವಾಹನಗಳಿಗೆ ಗೊಂದಲವಿಲ್ಲದ ಪಾರ್ಕಿಂಗ್ ವ್ಯವಸ್ಥೆ, ಸರಿಸುಮಾರು 1500-2000 ಜನ ಸೇರಿದರೂ ಆಸನ ವ್ಯವಸ್ಥೆ. ಹೀಗೆ ಎಲ್ಲಾ ರೀತಿಯಲ್ಲಿಯೂ ಸುಸುಜ್ಜಿತ ವ್ಯವಸ್ಥೆಗಳಲ್ಲಿ ಸಂಘಟಕರ ಶ್ರಮ ಎದ್ದು ಕಾಣುತ್ತಿದೆ. ಸಹೃದಯ ಕಲಾಭಿಮಾನಿಗಳು, ಕಲಾಪೋಷಕರು ಆಗಿರುವ ತಾವೆಲ್ಲರೂ ಯಕ್ಷವೈಭವದ ಸಾಕ್ಷಿಗಳಾಗಿ ಸಹಕರಿಸಲು ಯಕ್ಷ ಯುವ ಮಿತ್ರ ಬಳಗ ಆಲಕ್ಕಿ, ಸತ್ತೀಕಲ್ ಮತ್ತು ಗ್ರಾಮಸ್ಥರು ವಿನಂತಿಸಿದ್ದಾರೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.













