ಮೂಡಿಗೆರೆ: ಕಾಡಿನಿಂದ ನಾಡಿಗೆ ಬಂದ ಕಾಡುಬೆಕ್ಕು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಸುಶಾಂತ್ ನಗರದ ಬಡಾವಣೆಗ ಮಂಗಳವಾರ ಬೆಳ್ಳಂಬೆಳಗ್ಗೆ ಕಾಡಿನಿಂದ ಬಂದ ಕಾಡುಬೆಕ್ಕೊಂದನ್ನು ಬೀದಿ ನಾಯಿಗಳ ಗುಂಪು ಅಡ್ಡಾಡಿಸಿ ಅಕ್ರಮಣ ಮಾಡಿದ್ದು ನಾಯಿಗಳ ಅಕ್ರಮಣಕ್ಕೆ ಹೆದರಿದ ಕಾಡುಬೆಕ್ಕು ಪ್ರಾಣ ಉಳಿಸಿಕೊಳ್ಳಲು ಮನೆಯೊಂದಕ್ಕೆ ನುಗ್ಗಿದ್ದರಿಂದ ಪ್ರಾಣ ಉಳಿಸಿಕೊಂಡಿದೆ.


ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!


ಮೂಡಿಗೆರೆ ಶಾಸಕಿ ನಯನಾ ಮೋಟಮ್ಮಅವರ ಮನೆಯ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ಕಾಡು ಬೆಕ್ಕೊಂದು ಪ್ರತ್ಯಕ್ಷವಾಗಿದೆ. ಅದನ್ನು ನೋಡಿದ ಬೀದಿ ನಾಯಿಗಳ ಹಿಂಡು ಕಾಡುಬೆಕ್ಕನ್ನು ಅಟ್ಟಿಸಿಕೊಂಡು ಹೋಗಿ ದಾಳಿ ನಡೆಸಿದೆ. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಕಾಡುಬೆಕ್ಕು ಹೆದರಿ ಶಾಸಕರ ಮನೆಯ ಬಳಿಯೆಲ್ಲಾ ಓಡಾಡಿದೆ. ನಾಯಿಗಳು ಬೆಂಬಿಡದೆ ಅದರ ಹಿಂದೆ ಓಡಿ ಬೆಕ್ಕನ್ನು ಕಚ್ಚಿ ಎಳೆದಾಡಿ ಗಾಯಗೊಳಿಸಿದೆ. ಹೇಗೋ ನಾಯಿಗಳಿಂದ ತಪ್ಪಿಸಿಕೊಂಡ ಬೆಕ್ಕು ತನ್ನ ಪ್ರಾಣ ಉಳಿಸಿಕೊಳ್ಳಲು ಸುಶಾಂತ್ ನಗರದ ಪ್ರವೀಣ್‌ ಎಂಬುವವರ ಮನೆಯ ಗೇಟಿನೊಳಕ್ಕೆ ನುಗ್ಗಿದೆ. ಅದನ್ನು ಗಮನಿಸಿದ ಮನೆ ಮಾಲಿಕ ಪ್ರವೀಣ್ ಮತ್ತವರ ಪತ್ನಿ ಸವಿತಾ, ಮತ್ತು ಅದೇ ಬಡಾವಣೆಯ ನಿವಾಸಿ ಸುಧೀರ್‌ ಎಂಬುವವರು ನಾಯಿಗಳಿಂದ ಕಾಡುಬೆಕ್ಕನ್ನು ರಕ್ಷಿಸಿದ್ದಾರೆ.


ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ


ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಕಾಡುಬೆಕ್ಕನ್ನು ಪಶು ಆಸ್ಪತ್ರೆಗೆ ಸಾಗಿಸಿ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ ರಕ್ಷಿಸಿದ್ದಾರೆ. ನಂತರ ಅದನ್ನು ಅರಣ್ಯ ಸಿಬ್ಬಂದಿಗಳು ಸುರಕ್ಷಿತವಾಗಿ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.


ಇದನ್ನೂ ಓದಿ: ಮನೆ, ಆಫೀಸ್, ಅಂಗಡಿಯ ವಿದ್ಯುತ್​ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಂಧನ ಸಚಿವ


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.