ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಚಿಕ್ಕಮಗಳೂರು ತಾಲೂಕಿನ ಸಾರಗೋಡು, ಮತ್ತಿಖಂಡ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.
ಇದನ್ನೂ ಓದಿ: ಹುಟ್ಟೂರು ಶೃಂಗೇರಿಯನ್ನ ಕೊಂಡಾಡಿದ ವಜ್ರಕಾಯ ಬೆಡಗಿ; ನಾನು ಶೃಂಗೇರಿಯವಳು ಎನ್ನಲು ಈ ಕಾರಣಕ್ಕೆ ಹೆಮ್ಮೆ ನಭಾ ನಟೇಶ್..

ಮಲೆನಾಡು ಭಾಗದಲ್ಲಿ ಮಳೆ ಕೊಂಚ ವಿರಾಮ ನೀಡಿದ್ರು, ಕೆಲವೆಡೆ ಅವಾಂತರ ಮಾತ್ರ ನಿಂತಿಲ್ಲ. ಮತ್ತಿಖಂಡ ಗ್ರಾಮದ ಶೇಖರ್ ಎಂಬುವವರ ಮನೆ ಕುಸಿತವಾಗಿದ್ದು, ಸಾರಗೋಡು ಗ್ರಾಮದ ಲಕ್ಷ್ಮೀ ಎಂಬುವವರ ಮನೆ ಕೂಡ ಸಂಪೂರ್ಣ ಕುಸಿಯುವ ಆತಂಕದಲ್ಲಿದ್ದಾರೆ.

ಮನೆಯೊಳಗಿದ್ದ ಸಾವಿರಾರು ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ; ಶುರು-ಅಂತ್ಯ ಯಾವಾಗ?















