ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಐವರು ಸ್ನೇಹಿತರೊಂದಿಗೆ ಚಿಕ್ಕಮಗಳೂರಿನ ಕಾಮೇನಹಳ್ಳಿ ಜಲಪಾತ ವೀಕ್ಷಣೆಗೆ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಫಾಲ್ಸ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ವರುಣ್ (17) ಮೃತ ವಿದ್ಯಾರ್ಥಿ.
ಇದನ್ನೂ ಓದಿ: ಬಿಹಾರ ಚುನಾವಣೆ ಫಲಿತಾಂಶ; ಅಭೂತಪೂರ್ವ ಜಯದತ್ತ ಹೆಜ್ಜೆ ಹಾಕಿದ ಎನ್ಡಿಎ

ಬೆಳಗಾವಿಯಿಂದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಮೇನಹಳ್ಳಿ ಜಲಪಾತಕ್ಕೆ ಬಂದಿದ್ದರು. ಜಲಪಾತ ನೋಡಲು ಬಂಡೆ ಮೇಲೆ ನಿಂತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಂಡೆಮೇಲಿಂದ ಜಲಪಾತಕ್ಕೆ ನಿನ್ನೆ ಸಂಜೆ ಬಿದ್ದಿದ್ದ. ಇಂದು ಬೆಳಿಗ್ಗೆ ವಿದ್ಯಾರ್ಥಿ ಮೃತದೇಹವನ್ನು ನೀರಿನಿಂದ ತೆಗೆಯಲಾಗಿದೆ.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇನ್ನಿಲ್ಲ












