ಶೃಂಗೇರಿಯ ವಕೀಲರಾದ ವಿ.ಆರ್ ನಟಶೇಖರ್ ಬರೆದ ಜನಸಾಮಾನ್ಯರಿಗಾಗಿ ಕಾನೂನು ತಿಳುವಳಿಕೆ ಪುಸ್ತಕ ಲೋಕಾರ್ಪಣೆಗೆ ಸಿದ್ಧತೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಹಿರಿಯ ವಕೀಲರು, ಕನ್ನಡದಲ್ಲೇ ವಾದ ಮಂಡಿಸುತ್ತಿರುವ ವಿ.ಆರ್ ನಟಶೇಖರ್ ಅವರು ಜನಸಾಮಾನ್ಯರಿಗಾಗಿ ಕಾನೂನು ತಿಳುವಳಿಕೆ ಎಂಬ ಪುಸ್ತಕದ ಲೋಕಾರ್ಪಣಾ ಸಮಾರಂಭವನ್ನು 15-02-2024 ಗುರುವಾರದಂದು ಹೈಕೋರ್ಟ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

 

ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

ಶೃಂಗೇರಿಯಲ್ಲಿ 1990 ರಿಂದ ಈವರೆಗೆ ನ್ಯಾಯವಾದಿಗಳಾಗಿ, ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ಜೊತೆಗೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಕನ್ನಡದಲ್ಲೇ ವಾದ ಮಂಡಿಸುತ್ತಿರುವ, ಶೃಂಗೇರಿಯ ನ್ಯಾಯಾಲಯ ಆಗುವಲ್ಲಿ ಸಾಕಷ್ಟು ಶ್ರಮಿಸಿದ ವಿ.ಆರ್ ನಟಶೇಖರ್ ಅವರು “ಜನಸಾಮಾನ್ಯರಿಗಾಗಿ ಕಾನೂನು ತಿಳುವಳಿಕೆ” ಎಂಬ ಪುಸ್ತಕವನ್ನು ಪದ್ಮವಿಭೂಷಣ ಗೌ|| ನ್ಯಾ|| ಶ್ರೀ ಎಂ. ಎನ್. ವೆಂಕಟಾಚಲಯ್ಯ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳು, ಸರ್ವೋಚ್ಚ ನ್ಯಾಯಾಲಯ ಇವರು ಲೋಕಾರ್ಪಣಾ ಮಾಡಲಿದ್ದಾರೆ.

ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

ಈ ಹಿಂದೆ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅರ್ಜಿ ಸಲ್ಲಿಸುವ, ವಾದ ಮಂಡಿಸುವ 12 ಸರ್ಕಾರಿ ಅಭಿಯೋಜಕರು ಹಾಗೂ 18 ವಕೀಲರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಪೈಕಿ ವಿ.ಆರ್ ನಟಶೇಖರ್ ಅವರಿಗೆ ಕನ್ನಡ ಪ್ರಶಸ್ತಿ ದೊರಕಿತ್ತು.

 

ಬಿಜೆಪಿಯ 9 ಮಂಡಲಗಳ ನೂತನ ಅಧ್ಯಕ್ಷರು, ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ನೇಮಕ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿಯ 9 ಮಂಡಲಗಳ ಅಧ್ಯಕ್ಷರುಗಳು ಹಾಗೂ ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಪ್ರಕಟಣೆ ಹೊರಡಿಸಿದ್ದಾರೆ.

 

9 ಮಂಡಲಗಳ ಅಧ್ಯಕ್ಷರುಗಳ ಪಟ್ಟಿ:
* ಚಿಕ್ಕಮಗಳೂರು ನಗರ – ಕೆ.ಎಸ್. ಪುಷ್ಪರಾಜು
* ಚಿಕ್ಕಮಗಳೂರು ಗ್ರಾಮಾಂತರ- ವಿಜಯಕುಮಾರ್ ಗುಣಸಾಗರ
* ಕಡೂರು- ಬಿ.ಪಿ.ದೇವಾನಂದ್
* ತರೀಕೆರೆ- ಪ್ರತಾಪ್ ಗರಗದಹಳ್ಳಿ
* ಮೂಡಿಗೆರೆ- ಗಜೇಂದ್ರ ಕೊಟ್ಟಿಗೆಹಾರ
* ಆಲ್ದೂರು- ರವಿ ಬಸವರಹಳ್ಳಿ
* ಕೊಪ್ಪ – ದಿನೇಶ್ ಹೊಸೂರು
* ಎನ್.ಆರ್. ಪುರ- ಅರುಣ್ ಕುಮಾರ್
* ಶೃಂಗೇರಿ- ಉಮೇಶ್ ಭಟ್

ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ಪಟ್ಟಿ:
* ಯುವಮೋರ್ಚಾ – ಸಂತೋಷ್ ಕೋಟ್ಯಾನ್
* ಎಸ್.ಸಿ.ಮೋರ್ಚಾ – ಕೆ.ಪಿ.ವೆಂಕಟೇಶ್
* ಮಹಿಳಾ ಮೋರ್ಚಾ – ಜಸಂತಾ ಅನಿಲ್ ಕುಮಾರ್
* ರೈತ ಮೋರ್ಚಾ- ಶಂಬೈನೂರು ಆನಂದಪ್ಪ
* ಒಬಿಸಿ ಮೋರ್ಚಾ- ಟಿ.ಆರ್.ಲಕ್ಕಪ್ಪ ಕಡೂರು
* ಎಸ್.ಟಿ.ಮೋರ್ಚಾ- ಜೆ. ಮೌನೇಶಪ್ಪ ಕಳಸ
* ಅಲ್ಪಸಂಖ್ಯಾತರ ಮೋರ್ಚಾ- ಅಬ್ದುಲ್ ಕಬೀರ್

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.