ಆಲ್ದೂರು: ಪ್ರವಾಸಿ ವಾಹನ ಡಿಕ್ಕಿಯಾಗಿ ಮಹಿಳೆ ಸಾವು: ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಟೆಂಪೋ ಟ್ರಾವೆಲ್ ವಾಹನ ಸ್ಕೂಟಿಗೆ ಡಿಕ್ಕಿಯಾಗಿ ಸೋಮವಾರ ಮೃತಪಟ್ಟಿದ್ದ ನವಮಿ ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದು, ನೋವಿನಲ್ಲೂ ನವಮಿ ಕುಟುಂಬ ಸಾರ್ಥಕತೆ ಮೆರೆದಿದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಸೋಮವಾರ ಅಪಘಾತದಲ್ಲಿ ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ನವಮಿ (26) ಮೃತಪಟ್ಟಿದ್ದರು. ಒಬ್ಬಳೇ ಮಗಳನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ನಮ್ಮ ಬದುಕು ಶೂನ್ಯವಾಗಿದೆ ಎಂದು ನವಮಿ ತಾಯಿ ಅನ್ನಪೂರ್ಣ ಹೇಳಿದರು.

ನವಮಿಯ ಪತಿ ವಿಕಾಸ್ ಮಾತನಾಡಿ, ಮಂಗಳವಾರ ನವಮಿಯ ಹುಟ್ಟುಹಬ್ಬವಿತ್ತು. ಸೋಮವಾರ ಗಣರಾಜ್ಯೋತ್ಸವ ಪ್ರಯುಕ್ತ ಸಂಘದಲ್ಲಿ ಧ್ವಜಾರೋಹಣ ನಡೆಸಿ ಕುಟುಂಬದವರೆಲ್ಲ ಹೊರನಾಡಿಗೆ ಹೋಗಲು ತೀರ್ಮಾನಿಸಿದ್ದೆವು. ಟಿಟಿ ಚಾಲಕನ ಅಜಾಗರೂಕತೆಯಿಂದ ನಮ್ಮ ಮನೆಯ ಬೆಳಕೇ ಆರಿಹೋಗಿದೆ ಎಂದರು.

ಇದನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ

ಪಟ್ಟಣದ ಬೀರಂಜಿ ಹಳ್ಳದ ಬಳಿ ಅಪಘಾತದಲ್ಲಿ ಸಹಕಾರ ಸಂಘದ ಉದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆ ರಸ್ತೆಗೆ ಬ್ಯಾರಿಕೇಡ್ ಇಲ್ಲವೇ ಹಂಪ್ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.