ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ 76ನೇ ವರ್ಧಂತಿ ಮಹೋತ್ಸವ ಮಾ.24ರಂದು ನೆರವೇರಲಿದೆ.
ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ; ಇನ್ಮುಂದೆ ಗಾಡಿ FC ಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಜಗದ್ಗುರುಗಳ ವರ್ಧಂತಿ ಮಹೋತ್ಸವ ಅಂಗವಾಗಿ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. 19ರ ಬೆಳಗ್ಗೆ 8 ಗಂಟೆಗೆ ಶ್ರೀಮಠದ ಯಾಗ ಮಂಟಪದಲ್ಲಿ ಸಹಸ್ರಮೋದಕ ಗಣ ಹೋಮ, ಅತಿರುದ್ರ ಪುರ ಶ್ವರಣಾ ಮಹಾಸಂಕಲ್ಪ, ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸಭಾಭವನದಲ್ಲಿ ಸಹಸ್ರ ಚಂಡಿಕಾ ಮಹಾಸಂಕಲ್ಪ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
20ರಂದು 12 ಗಂಟೆಗೆ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮೀಜಿ ಆರಾಧನಾ ಮಹೋತ್ಸವದ ಅಂಗವಾಗಿ ಜಗದ್ಗುರುಗಳಿಂದ ವಿಶೇಷ ಪೂಜೆ ನೆರವೇರಲಿದೆ. 21ರ ಬೆಳಗ್ಗೆ 9 ಗಂಟೆಗೆ ಋಕ್ಸಂಹಿತಾ ಯಾಗದ ಸಂಕಲ್ಪ ನರಸಿಂಹವನದಲ್ಲಿ ಜರುಗಲಿದೆ.
ಇದನ್ನೂ ಓದಿ: ನಿಮ್ಮ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದೀರಾ?; ಅಂತಹವರು ಈ ಸ್ಟೋರಿ ಓದಲೇಬೇಕು?
22ರ 12.30ಕ್ಕೆ ನರಸಿಂಹಯಾಗದ ಮಂಟಪದಲ್ಲಿ ಸಹಸ್ರ ನಾರಿಕೇಳ ಗಣಹೋಮದ ಪೂರ್ಣಾಹುತಿ ಜರುಗಲಿದೆ. 23ರ ಮಧ್ಯಾಹ್ನ 11.30ಕ್ಕೆ ಜಗದ್ಗುರುಗಳು ಈಶ್ವರಗಿರಿ ಶ್ರೀ ಮಲಹಾನಿಕರೇಶ್ವರ ಸ್ವಾಮಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. 24ರ ಬೆಳಗ್ಗೆ 7 ಗಂಟೆಗೆ ಗುರುನಿವಾಸದಲ್ಲಿ ಜಗದ್ಗುರುಗಳ ಆತ್ಮಿಕ ದರ್ಶನ, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾಂಬೆಗೆ ಜಗದ್ಗುರುಗಳಿಂದ ವಿಶೇಷ ಪೂಜೆ, 12.30ಕ್ಕೆ ಸಹಸ್ರಚಂಡಿಕಾ ಮಹಾಯಾಗದ ಪೂರ್ಣಾಹುತಿ, ಸಂಜೆ 6 ಗಂಟೆಗೆ ಗುರು ನಿವಾಸದಲ್ಲಿ ಗುರುವಂದನಾ ಕಾರ್ಯಕ್ರಮ ಜಗದ್ಗುರುಗಳಿಂದ ಅನುಗ್ರಹ ಭಾಷಣ ಜರುಗಲಿದೆ.
27ರಂದು ಮಧ್ಯಾಹ್ನ ಶ್ರೀರಾಮನವಮಿ ಪ್ರಯುಕ್ತ ಗುರು ನಿವಾಸದಲ್ಲಿ ವಿಶೇಷ ಪೂಜೆ ಜರುಗಲಿದೆ. 28ರಂದು ಮಧ್ಯಾಹ್ನ 12 ಗಂಟೆಗೆ ಋಕ್ಸಂಹಿತಾ ಯಾಗದ ಪೂರ್ಣಾಹುತಿ ನರಸಿಂಹವನದಲ್ಲಿ ನೆರವೇರಲಿದೆ. 30ಕ್ಕೆ ಮಧ್ಯಾಹ್ನ 12.30ಕ್ಕೆ ಅತಿರುದ್ರ ಯಾಗದ ಪೂರ್ಣಾಹುತಿ ನೆರವೇರಲಿದೆ.












