ಜಲಪಾತ ಸಿನಿಮಾಕ್ಕೆ 50 ದಿನದ ಸಂಭ್ರಮ | ಇಂದು ಶೃಂಗೇರಿಯ ಗೌರಿ ಶಂಕರ್ ಸಭಾಂಗಣದಲ್ಲಿ ಸಿನಿಮಾ ಪ್ರದರ್ಶನ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇಂಡಸ್ ಹರ್ಬ್ಸ್ ನ ಟಿ.ಸಿ ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿ ಸಾಧನೆ ಮಾಡಿದೆ.

 

ಇದನ್ನೂ ಓದಿ; ಫಾರೆಸ್ಟ್ ಗಾರ್ಡ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ;  540 ಹುದ್ದೆಗಳ ಭರ್ತಿಗೆ ಅಧಿಸೂಚನೆ; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹುದ್ದೆ

ಸಾಲು ಸಾಲು ಬಿಗ್ ಬ್ಯಾನರ್ ಮತ್ತು ಪರ ಭಾಷಾಚಿತ್ರಗಳ ಲಗ್ಗೆಯ ನಡುವೆಯೂ ಹೊಸಬರೇ ತುಂಬಿ ತುಳುಕಿರುವ ಜಲಪಾತ ತನ್ನ ಅಪ್ಪಟ ಮಲೆನಾಡ ಸಿಗ್ನೀಚರ್ ನ್ನು ಬಿಂಬಿಸಿರುವುದು ಸದಭಿರುಚಿಯ ಮತ್ತು ಪ್ರಾಮಾಣಿಕ ಮೇಕಿಂಗ್ ನ್ನು ಎಂದೂ ಕನ್ನಡ ಜನತೆ ಕೈಬಿಡುವುದಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದೆ. 2023 ರ ಯಶಸ್ವಿ ಚಿತ್ರವೆಂದು ಖ್ಯಾತಿ ಪಡೆದಿದೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಿಂದ 5/5 ರೇಟಿಂಗ್ ಪಡೆದಿದೆ. ಐಎಂಡಿ ಬಿ ಮತ್ತು ಬುಕ್ ಮೈ ಶೋ ರೇಟಿಂಗ್ ಕೂಡ 9.4ನ್ನು ದಾಖಲಿಸಿದೆ. ಇದೀಗ ಜಲಪಾತ ಸಿನಿಮಾ ತಾಲೂಕುಗಳಲ್ಲಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

ಇದನ್ನೂ ಓದಿ; 8 ಬಾರಿ ಅಂಬಾರಿ ಹೊತ್ತಿದ್ದ ಎಲ್ಲರ ಪ್ರೀತಿಯ ಅರ್ಜುನ ಸಾವು;  ಕಾಡಾನೆಯ ಭೀಕರ ದಾಳಿ, ಅರ್ಜುನನ ಮೇಲಿಂದ ಇಳಿದು ಓಡಿದ್ದ ಮಾವುತರು

ಇಂದು ಪಟ್ಟಣದ ಗೌರಿ ಶಂಕರ್ ಸಭಾಂಗಣದಲ್ಲಿ ಪ್ರದರ್ಶನ:
ಹೌದು. ಬೆಂಗಳೂರಿನ ಇಂಡಸ್ ಹರ್ಬ್ಸ್ ಸಂಸ್ಥೆ ಮಾಲೀಕ, ಕಟ್ಟೆಹಕ್ಕಲು ಮೂಲದ ಉದ್ಯಮಿ, ಪರಿಸರ ತಜ್ಞ ರವೀಂದ್ರ ತುಂಬರಮನೆ ಅವರ ನಿರ್ಮಾಣದಲ್ಲಿ ಶೃಂಗೇರಿಯ ಅನುಭವಿ ರಂಗಭೂಮಿ ಮತ್ತು ಸಿನಿಮಾ ನಿರ್ದೇಶಕ ರಮೇಶ್ ಬೇಗಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಜಲಪಾತ ಸಿನಿಮಾ ಡಿ.5ರಂದು ಮಂಗಳವಾರ (ಇಂದು) ಶೃಂಗೇರಿ ಪಟ್ಟಣದ ಗೌರಿ ಶಂಕರ್ ಸಭಾಂಗಣದಲ್ಲಿ ಪ್ರದರ್ಶನ ಕಾಣಲಿದೆ.

 

ಡಿಸೆಂಬರ್ 5ರ ಮಂಗಳವಾರ (ಇಂದು) ಬೆಳಿಗ್ಗೆ 10-30 ಮತ್ತು ಮಧ್ಯಾಹ್ನ 2 ಘಂಟೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರದರ್ಶನ ನಡೆಯಲಿದೆ. ಹಾಗೂ ಸಂಜೆ 6-30 ಮತ್ತು ರಾತ್ರಿ 9- 30ಕ್ಕೆ ಸಾರ್ವಜನಿಕರಿಗಾಗಿ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್ಲಾ ಪ್ರದರ್ಶನಕ್ಕೂ ಸಾಂಕೇತಿಕ ಪ್ರವೇಶ ದರ ಇರಲಿದ್ದು ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನದ ಬೃಹತ್ ಎಲ್.ಇ.ಡಿ ವಾಲ್ ನಲ್ಲಿ ಮೂಡಿಬರಲಿದೆ. ಶೃಂಗೇರಿಯ ಶ್ರೀ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್ (ರಿ) ಮತ್ತು ರಂಗಮಿತ್ರರು ಜಂಟಿಯಾಗಿ ಈ ಕಾರ್ಯಕ್ರಮ ಸಂಯೋಜಿಸಿದ್ದಾರೆ.

ಡಿಸೆಂಬರ್ 5 ರ 6-30ರ ಶೋ ಸಮಯ 50 ದಿನದ ಸುವರ್ಣ ಸಂಭ್ರಮದ ಆಚರಣೆ ಇರುತ್ತದೆ ಎಂದು ಟ್ರಸ್ಟ್ ತಿಳಿಸಿದ್ದು ಹೆಚ್ಚಿನ ಮಾಹಿತಿಗೆ ರಮೇಶ್ ಬೇಗಾರ್ ಇವರನ್ನು 9448101708 ದೂರವಾಣಿಯಲ್ಲಿ ಸಂಪರ್ಕಿಸಬಹುದಾಗಿದೆ.

 

ಎನ್.ಆರ್.ಪುರ: ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ಎರಚಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಸುಂದರ್ ರಾಜ್ ಎಂಬುವರ ಮೇಲೆ ಪಕ್ಕದ ಮನೆ ಜೇಮ್ಸ್ ಆಸಿಡ್ ದಾಳಿ ಮಾಡಿರುವ ವ್ಯಕ್ತಿ.

ಇದನ್ನೂ ಓದಿ; ಬರ ಸಂತ್ರಸ್ತ ರೈತರಿಗೆ ಗುಡ್‌ ನ್ಯೂಸ್‌; ಮೊದಲ ಕಂತಿನ ಬರ ಪರಿಹಾರ ಘೋಷಿಸಿದ ಸಿಎಂ; ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ ನಾಯಿಗೆ ಬೈದಿದ್ದಾನೆ, ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಕ್ಕದ ಮನೆ ವ್ಯಕ್ತಿ ಜೇಮ್ಸ್ ಆಸಿಡ್ ದಾಳಿ ಮಾಡಿದ್ದಾನೆ. ಆಸಿಡ್ ದಾಳಿಗೊಳಗಾದ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿ, ಕಣ್ಣಿನ ಪದರ ಬದಲಿಸುವಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ವೈದ್ಯರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ; FID ಸರ್ವೆ ನಂಬರ್ ಗಳಿಗೆ ಮಾತ್ರ ಸಿಗಲಿದೆ ಬೆಳೆಹಾನಿ ಪರಿಹಾರ; ನಿಮ್ಮ FID ಗೆ ಎಷ್ಟು ಸರ್ವೆ ನಂಬ‌ರ್ ಜೋಡಣೆ ಆಗಿದೆ; ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ನಾಯಿ ಹೆಸರಿನಲ್ಲಿ ಜೇಮ್ಸ್ ಗೆ ಮಾಲೀಕ ಬೈಯುತ್ತಿದ್ದ ಎನ್ನಲಾಗಿದ್ದು ಇದರಿಂದ ಸಿಟ್ಟಿಗೆದ್ದು ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಜೇಮ್ಸ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.