ಜಯಪುರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ | 50ವರ್ಷ ವಯಸ್ಸಿನ ವ್ಯಕ್ತಿ ಬಂಧನ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ 50ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಜಯಪುರ ಪೊಲೀಸರು, ಭಾನುವಾರ ಬಂಧಿಸಿದ್ದು, ಪೋಕ್ಸೋ ಖಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

 

ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಾರದವರಿಗೆ ಮಹತ್ವದ ಸುದ್ದಿ; ಮನೆಬಾಗಿಲಿಗೇ ಬರಲಿದ್ದರೆ ಅಂಗನವಾಡಿ ಕಾರ್ಯಕರ್ತೆಯರು

ಅಂಗಡಿಗೆ ವಸ್ತುಕೊಳ್ಳಲು ಬಂದ ಬಾಲಕಿಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದ್ದು. ಈ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಸಂತ್ರಸ್ಥ ಬಾಲಕಿಯ ಪೋಷಕರು ಆರೋಪಿಯ ವಿರುದ್ದ ಜಯಪುರ ಠಾಣೆಗೆ ದೂರು ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಜಯಪುರ ಪೊಲೀಸ್ ಠಾಣೆಯ ಪಿಎಸ್ಐ ಅಂಬರೀಶ್ ಆರೋಪಿಯನ್ನು ಬಂಧಿಸಿ, ಪೋಕ್ಸೋ ಹಾಗೂ ಐಪಿಸಿ 354 ಖಾಯ್ದೆ ಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ; ರಾಜ್ಯದ SC/ST ಸಮುದಾಯಕ್ಕೆ ಮತ್ತೊಂದು ಗುಡ್‌ ನ್ಯೂಸ್‌; GIG ವರ್ಕರ್ಸ್‌ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಎನ್.ಆರ್.ಪುರ: ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ

 

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ಎರಚಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಸುಂದರ್ ರಾಜ್ ಎಂಬುವರ ಮೇಲೆ ಪಕ್ಕದ ಮನೆ ಜೇಮ್ಸ್ ಆಸಿಡ್ ದಾಳಿ ಮಾಡಿರುವ ವ್ಯಕ್ತಿ.

ಇದನ್ನೂ ಓದಿ; ಎಸ್‌.ಎಸ್‌.ಎಲ್‌.ಸಿ, ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ ನಾಯಿಗೆ ಬೈದಿದ್ದಾನೆ, ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಕ್ಕದ ಮನೆ ವ್ಯಕ್ತಿ ಜೇಮ್ಸ್ ಆಸಿಡ್ ದಾಳಿ ಮಾಡಿದ್ದಾನೆ. ಆಸಿಡ್ ದಾಳಿಗೊಳಗಾದ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿ, ಕಣ್ಣಿನ ಪದರ ಬದಲಿಸುವಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ವೈದ್ಯರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ; ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಳ; ಇಲ್ಲಿದೆ ಇವತ್ತಿನ ದರಪಟ್ಟಿ

ನಾಯಿ ಹೆಸರಿನಲ್ಲಿ ಜೇಮ್ಸ್ ಗೆ ಮಾಲೀಕ ಬೈಯುತ್ತಿದ್ದ ಎನ್ನಲಾಗಿದ್ದು ಇದರಿಂದ ಸಿಟ್ಟಿಗೆದ್ದು ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಜೇಮ್ಸ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 05.12.2023

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.