ಸಿ.ಟಿ ರವಿ ಸೇರಿದಂತೆ 11 ಅಭ್ಯರ್ಥಿಗಳು ವಿಧಾನ ಪರಿಷತ್’ಗೆ ಅವಿರೋಧವಾಗಿ ಆಯ್ಕೆ

ವಿಧಾನಪರಿಷತ್‌ ಚುನಾವಣೆಗೆ (MLC Election) ನಾಮಪತ್ರ ಸಲ್ಲಿಸಿದ್ದ ಎಲ್ಲಾ 11 ಅಭ್ಯರ್ಥಿಗಳು ಪರಿಷತ್ ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆ | 25,000 ವರೆಗೂ ಸಂಬಳ


ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಜೂನ್‌ 13ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ನಾಮಪತ್ರ ಸಲ್ಲಿಸಿದ್ದ 11 ಅಭ್ಯರ್ಥಿಗಳು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದಿರುವ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ 7, ಬಿಜೆಪಿ 3 ಹಾಗೂ ಜೆಡಿಎಸ್‌’ನ ಒಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!


ಕಾಂಗ್ರೆಸ್‌ ಸದಸ್ಯರು – 07
1.ಐವಾನ್‌ ಡಿಸೋಜ
2.ಕೆ.ಗೋವಿಂದರಾಜ್
3.ಜಗದೇವ ಗುತ್ತೇದಾರ್‌
4.ಬಲ್ಕೀಸ್‌ ಬಾನು
5.ಎನ್‌.ಎಸ್‌.ಭೋಸರಾಜು
6.ಡಾ.ಯತೀಂದ್ರ ಸಿದ್ದರಾಮಯ್ಯ‌ 7. ವಸಂತ್‌ ಕುಮಾರ್

ಬಿಜೆಪಿ ಸದಸ್ಯರು – 03
8. ಸಿ.ಟಿ.ರವಿ
9. ಎನ್‌.ರವಿಕುಮಾರ್
10. ಮಾರುತಿರಾವ್‌ ಮುಳೆ


ಇದನ್ನೂ ಓದಿ: 1.16 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್ ಹಣ; ಕಾರಣವೇನು ಗೊತ್ತಾ? ಇಲ್ಲಿದ ನೋಡಿ


ಜೆಡಿಎಸ್‌ ಸದಸ್ಯರು – 01
11. ಟಿ.ಎನ್. ಜವರಾಯಿಗೌಡ

ಈ ಬಗ್ಗೆ ಚುನಾವಣಾಧಿಕಾರಿ ಅಧೀಕೃತ ಘೋಷಣೆ ಹೊರಡಿಸಿದ್ದಾರೆ.


ಇದನ್ನೂ ಓದಿ: ರೈತರೇ ಗಮನಿಸಿ..; ಬರ ಪರಿಹಾರ ಪಡೆಯಲು “ಫೂಟ್ಸ್ ಐಡಿ” ಕಡ್ಡಾಯ..!


ಜೂನ್‌ 13ರಂದು ಚುನಾವಣೆ ನಿಗದಿಯಾಗಿತ್ತು. ಅದರಂತೆ ಜೂನ್ 3 ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಒಟ್ಟು 11 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು.

ಭಾರೀ ಅಂತರದ ಗೆಲುವಿನ ಬಳಿಕ ಕೋಟಾ ಮೊದಲ ಪ್ರತಿಕ್ರಿಯೆ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಭಾರೀ ಅಂತರದ ಮುನ್ನಡೆ ಸಾಧಿಸಿದ್ದಾರೆ.

ಸಧ್ಯ ಸುಮಾರು 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿರುವ ಕೋಟಾ ಶ್ರೀನಿವಾಸ ಪೂಜಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ..

ನನ್ನ ಗೆಲುವಿಗೆ ಸಹಕರಿಸಿದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮತ್ತು ರಾಷ್ಟ್ರೀಯ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ, ಹಾಗೆಯೇ ಕಾಂಗ್ರೆಸ್ ಮುಖಂಡರು ನನಗೆ ಹಿಂದಿ ಬರುವುದಿಲ್ಲ ಎಂದಿದ್ದರು, ಮುಂದಿನ 6 ತಿಂಗಳ ಒಳಗಾಗಿ ಹಿಂದಿ ಕಲಿತು ಸಂಸತ್ತಿನಲ್ಲಿ ಮಾತನಾಡುತ್ತೇನೆ. ಆದರೆ ನನ್ನ ಬಗ್ಗೆ ಟೀಕೆ ಮಾಡಿದವರ ಮುಂದಿನ ರಾಜಕೀಯ ಭವಿಷ್ಯ ಯಾವ ಪಕ್ಷದಲ್ಲಿ ಎಂದು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.