ಕಡೂರು: (ನ್ಯೂಸ್ ಮಲ್ನಾಡ್ ವರದಿ) ಕಡೂರು ರಸ್ತೆಯ ಲಕ್ಯಾ ಕ್ರಾಸ್ ಬಳಿ ಸೋಮವಾರ ನಡೆದ ಸರಣಿ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಚಿಕ್ಕಮಗಳೂರ ಕಡೆಯಿಂದ ಮರದ ತುಂಡುಗಳನ್ನು ತುಂಬಿಕೊಂಡು ಕಡೂರು ಕಡೆಗೆ ಸಾಗುತ್ತಿದ್ದ ಲಾರಿ ಲಕ್ಯಾ ಕ್ರಾಸ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಿಕ್‌ಅಪ್ ವಾಹನಕ್ಕೆ ಡಿಕ್ಕಿಯಾಗಿದೆ.

ಲಾರಿ ಗುದ್ದಿದ ರಭಸಕ್ಕೆ ಪಿಕಪ್ ವಾಹನವು ಎದುರಿನಿಂದ ಬಂದ ಓಮಿನಿ ವಾಹನಕ್ಕೆ ಗುದ್ದಿದೆ. ಓಮಿನಿ ವ್ಯಾನ್ ಸಿಲಿಂಡರ್ ತುಂಬಿದ್ದ ಲಾರಿ ಹಾಗೂ ಬೈಕಿಗೆ ಗುದ್ದಿದೆ. ಈ ವೇಳೆ ಓಮಿನಿ ವ್ಯಾನಿನಲ್ಲಿದ್ದ ಪ್ರಶಾಂತ್ (28) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅದೇ ವಾಹನದಲ್ಲಿದ್ದ ಮತ್ತಿಬ್ಬರು ಮತ್ತು ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.













