ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರೀ ಮಳೆಯಿಂದಾಗಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ಸರಿಪಡಿಸಲು ಹೋದ ವೇಳೆ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಮಂಗಳವಾರ ಸಂಜೆ ತಾಲೂಕಿನ ಗಂಜಲಗೋಡು ಗ್ರಾಮದಲ್ಲಿ ನಡೆದಿದ್ದು, ಗಂಲಗೋಡು ಗ್ರಾಮದ ನಿವಾಸಿ ಜೀವಿತ್(23) ಮೃತ ಯುವಕನಾಗಿದ್ದಾನೆ.


ಇದನ್ನೂ ಓದಿ: ಮಹಿಳೆಯರೇ ಗಮನಿಸಿ; ಇನ್ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ!


ಕಳೆದ ರಾತ್ರಿ ಗ್ರಾಮದಲ್ಲಿ ಸುರಿದ ಭಾರೀ ಮಳೆ ಗಾಳಿಯಿಂದಾಗಿ ಜೀವಿತ್ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದ ವಿದ್ಯುತ್ ತಂತಿ ತೋತು ಬಿದ್ದಿತ್ತು. ಆ ವಿದ್ಯುತ್ ತಂತಿಯನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮವಹಿಸದೆ ಸರಿಪಡಿಸಲು ಜೀವಿತ್ ಮುಂದಾಗಿದ್ದ ಎನ್ನಲಾಗಿದೆ. ತಂತಿ ಸರಿಪಡಿಸಲು ಮುಂದಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.


ಇದನ್ನೂ ಓದಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್; ಈ ವರ್ಷವೂ ಐದು ಗ್ಯಾರಂಟಿಗಳಿಗೆ ಹಣ ಮೀಸಲು, ಎಷ್ಟು ಗೊತ್ತಾ?


ತಂದೆ ಮಗ ಇಬ್ಬರೂ ಸಾವು, ಅನಾಥೆಯಾದ ತಾಯಿ

ಇನ್ನು ವಿದ್ಯುತ್ ಅವಘಡದಿಂದ ಮೃತಪಟ್ಟಿರುವ ಜೀವಿತ್ ನ ತಂದೆ ಶೇಖರಪ್ಪ ಎರಡು ವರ್ಷದ ಹಿಂದೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದರು. ಗಂಡನನ್ನು ಕಳೆದುಕೊಂಡ ದುಃಖದಲ್ಲಿದ್ದ ರೇಣುಖಾ ಇತ್ತ ತನ್ನ ಇದ್ದ ಒಬ್ಬ ಮಗನನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್;  ನೇಮಕಾತಿ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಆಟೋ ಪಲ್ಟಿ: ಚಾಲಕ ಸಾವು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಆಟೋ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್-ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ನಡೆದಿದೆ. ಬಾಳೂರು ಹೋಬಳಿಯ ಮಲೆಮನೆಯ ರವಿ (28) ಮೃತ ದುರ್ದೈವಿ.


ಇದನ್ನೂ ಓದಿ: ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸೋರಿಗೆ ಬಂತು ಮತ್ತೊಂದು ಅಪ್ಡೇಟ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


ಆಸ್ಪತ್ರೆಯಿಂದ ರೋಗಿಯನ್ನು ಕರೆದುಕೊಂಡು ಹೋಗಲು ತೆರಳುತ್ತಿದ್ದ ರವಿ ಬಣಕಲ್- ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ನಿಯಂತ್ರಣ ತಪ್ಪಿ ರಸ್ತೆಗೆ ಆಟೋ ಪಲ್ಟಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರವಿಯನ್ನು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: ರೈತರೇ ಗಮನಿಸಿ; ಬರಪರಿಹಾರ ಹಣದ ಕುರಿತು ಸರ್ಕಾರದಿಂದ ಮಹತ್ವದ ಸೂಚನೆ; ತಪ್ಪದೇ ಈ ಸುದ್ದಿ ಓದಿ


ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.