ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 1924ರಲ್ಲಿ ನಡೆದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮ ಇದರ ನೆನಪಿಗಾಗಿ ಮೇ 5ರಂದು ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದರ ಸವಿನೆನಪಿಗೆ ತಾಲೂಕಿನಲ್ಲಿ ಬೆಳಗಾವಿ ಅಧಿವೇಶನದ ನಿರ್ಣಯದಂತೆ ಜೈ ಬಾಪು, ಜೈಭೀಮ್, ಜೈಸಂವಿಧಾನ್, ಜೈ ಭಾರತ್ ಕಾರ್ಯಕ್ರಮವನ್ನು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಧ್ಯಾಹ್ನ 3 ಕ್ಕೆ ಆಯೋಜಿಸಲಾಗಿದೆ.
ಇದನ್ನೂ ಓದಿ: ಪಂಪ್ ಸೆಟ್ ಕುರಿತು ರಾಜ್ಯ ಸರ್ಕಾರದಿಂದ ಹೊಸ ಆದೇಶ; ಆದೇಶ ಪ್ರತಿ ಇಲ್ಲಿದೆ ನೋಡಿ
ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ. ರಾಜೇಗೌಡ, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ ಕುಮಾರ್ ಸೊರಕೆ, ಮುಖಂಡರಾದ ಸುಧೀರ್ ಕುಮಾರ್ ಮೂರೊಳ್ಳಿ, ಕಿಮ್ಮನೆ ರತ್ನಾಕರ್, ಡಾ. ಅಂಶುಮಂತ್, ಶ್ರೀಜಿತ್ ಗೌಡ, ನಟರಾಜ ಮಾರನಕೊಡಿಗೆ, ದುರ್ಗಾಚರಣ್ ಕುಂಚೂರ್ ಭಾಗವಹಿಸಲಿದ್ದು, ಅಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತಕ ಲಕ್ಷ್ಮೀಶ್ ಗಬ್ಬಲಡ್ಕ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ.
ಇದನ್ನೂ ಓದಿ: ಸಾಮೂಹಿಕ ವಿವಾಹಕ್ಕೆ ಸಿಗಲಿದೆ 50000 ರೂ.; ಅರ್ಜಿ ಸಲ್ಲಿಕೆ ಹೇಗೆ?












