ಜಯಪುರ: ಖಾಸಗಿ ವಸತಿ ಶಾಲೆಯ ಮೂರನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಿಗೆಯ ಖಾಸಗಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಯಲ್ಲಿ ಮಂಗಳವಾರ ಮುಂಜಾನೆ ಚಿಕ್ಕಬಳ್ಳಾಪುರ ಮೂಲದ ಪೋಷಕರೊಬ್ಬರು ಮೂರನೆ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ವರದಿಯಾಗಿದೆ. ಚೈತ್ರ ಗಜೇಂದ್ರ (33) ಸಾವನ್ನಪ್ಪಿರುವ ಮಹಿಳೆ.

ಪೋಷಕರ ಸಭೆಗೆಂದು ಬಂದ ಚೈತ್ರಾ ಮಂಗಳವಾರ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಶಾಲೆಯ 3ನೇ ಮಹಡಿಯಿಂದ ಬಿದ್ದಿದ್ದಾರೆ ಎನ್ನಲಾಗಿದೆ. ಮಹಿಳೆ ಚಿಕ್ಕಬಳ್ಳಾಪುರ ಮೂಲದ ಹೂವಿನ ವ್ಯಾಪಾರಿಯಾಗಿದ್ದ ಈಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಪತಿಯಿಂದ ದೂರವಿದ್ದರು ಎನ್ನಲಾಗಿದೆ. ಘಟನಾ ಸಂಬಂಧ ಮೃತರ ತಾಯಿ ವೆಂಕಟಲಕ್ಷ್ಮಮ್ಮ ಜಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಕೊಪ್ಪ ಸಿಪಿಐ ಮಂಜುನಾಥ್, ಜಯಪುರ ಪೊಲೀಸ್ ಠಾಣಾಧಿಕಾರಿ ಅಂಬರೀಷ್ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.


ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಸೋಮವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (08.07.2024)

ಶಿವಮೊಗ್ಗ
ಗೊರಬಲು: 22568- 33609
ಬೆಟ್ಟೆ: 50500- 53899
ರಾಶಿ: 32809- 51621
ಸರಕು: 53000- 76863

ಹೊನ್ನಳ್ಳಿ:
ರಾಶಿ: 50791- 50455

ಚಿತ್ರದುರ್ಗ:
ರಾಶಿ: 49600-49400
ಅಪಿ: 50100-49900
ಕೆಂಪುಗೋಟು: 28600-28400
ಬೆಟ್ಟೆ -35000: 34800

ಸಿದ್ಧಾಪುರ
ಬಿಳೆಗೋಟು: 29899- 27899
ರಾಶಿ: 46399- 45699

ಯಲ್ಲಾಪೂರ
ತಟ್ಟಿಬೆಟ್ಟೆ: 44895- 51800
ಬಿಳೆಗೋಟು: 24299- 30469
ರಾಶಿ: 44895- 51800

ದಾವಣಗೆರೆ
ರಾಶಿ: 48512- 52159

ಚನ್ನಗಿರಿ
ರಾಶಿ: 51900- 50569

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.