ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯೊಬ್ಬರನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಅರೆನೂರು ಗ್ರಾಮದಲ್ಲಿ ನಡೆದಿದೆ. ಸಂಧ್ಯಾ (33) ಹತ್ಯೆಯಾದ ಮೃತ ದುರ್ದೈವಿ.
ಇದನ್ನೂ ಓದಿ: ಆಧಾರ್ & ರೇಷನ್ ಕಾರ್ಡ್ ಇದ್ರೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ

ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಹಂತಕ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

ಕೊಲೆಯ ಭೀಕರತೆ ಎಷ್ಟಿತ್ತೆಂದರೆ, ಬದುಕುವ ಧಾವಂತದಲ್ಲಿ ಸಂಧ್ಯಾ ಅವರು ಮನೆಯ ತುಂಬಾ ಓಡಾಡಿದ್ದು, ರಕ್ತ ಚೆಲ್ಲಾಡಿದೆ. ಗೋಡೆ ಹಿಡಿದು ಏಳಲು ಪ್ರಯತ್ನಿಸಿದ ಸಂಧ್ಯಾ ಅವರ ರಕ್ತಮಿಶ್ರಿತ ಹಸ್ತದ ಗುರುತುಗಳು ಗೋಡೆಯ ಮೇಲೆ ಮೂಡಿರುವುದು ಘಟನೆಯ ಕ್ರೌರ್ಯವನ್ನು ಸೂಚಿಸುತ್ತದೆ.
ಸಂಧ್ಯಾ ಅವರು ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದರು. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಇವರ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಸಹ ದಾಖಲಾಗಿತ್ತು. ಸೋಮವಾರ ಸಂಜೆ ಅರೆನೂರು ಗ್ರಾಮದ ಮನೆಗೆ ವಾಪಸ್ ಬಂದಿದ್ದ ಸಂಧ್ಯಾ ಅವರು ನಿನ್ನೆ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಇದನ್ನೂ ಓದಿ: ವಿದ್ಯಾಸಿರಿ ಸೇರಿ ವಿವಿಧ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ
ಆಲ್ದೂರು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.













