ಕಳಸ: ಅರಣ್ಯದಲ್ಲಿ ಕಾಡ್ಗಿಚ್ಚು: ಕಿಡಿಗೇಡಿಗಳ ಕೃತ್ಯಕ್ಕೆ 1 ಎಕರೆ ಪ್ರದೇಶ ಬೆಂಕಿಗಾಹುತಿ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಪಂ ವ್ಯಾಪ್ತಿಯಲ್ಲಿರುವ ಕೊಟ್ಟಿಗೆಹಾರ-ಕಳಸ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಮಿಲ್ಲುಗುಡ್ಡದ ಸುಮಾರು 1 ಎಕರೆ ಅರಣ್ಯ ಪ್ರದೇಶ ಸೋಮವಾರ ಬೆಂಕಿಗೆ ಆಹುತಿಯಾಗಿದೆ.


ಇದನ್ನೂ ಓದಿ: ಮನೆಗೆ ಜೈವಿಕ ಅನಿಲ ಘಟಕ ಸೇರಿದಂತೆ ಸಬ್ಸಿಡಿ; ಯಾರಿಗೆ ಸಬ್ಸಿಡಿ? ಎಷ್ಟು ಸಹಾಯಧನ?


ಕಳಸ ತಾಲೂಕು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವುದಲ್ಲದೆ ಧಾರ್ಮಿಕ ಯಾತ್ರಾ ಸ್ಥಳವೂ ಆಗಿದೆ. ಹೀಗೆ ಬರುವ ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಸಿಗರೇಟು ಸೇದುವುದು, ಮದ್ಯಪಾನ ಮಾಡುವುದು ಸಾಮಾನ್ಯವಾಗಿದೆ. ಸಿಗರೇಟು ಸೇದುವ ಕಿಡಿಗೇಡಿಗಳ ಕೃತ್ಯದಿಂದಾಗಿ ಮರಸಣಿಗೆ ಗ್ರಾಮ ಹಾಗೂ ಹಿರೇಬೈಲು ಗ್ರಾಮಗಳ ನಡುವೆ ಇರುವ ಮಿಲ್ಲುಗುಡ್ಡ ಎಂಬಲ್ಲಿನ ಅರಣ್ಯಕ್ಕೆ ಬೆಂಕಿ ಹರಡಿದೆ ಎಂದು ಸ್ಥಳೀಯರು ಹೇಳುತ್ತಿದ್ದು ಬೆಂಕಿಯ ಕೆನ್ನಾಲಿಗೆ ಸುಮಾರು ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: ಟೆಸ್ಲಾ ಪ್ರಿಯರಿಗೆ ಬಂಪರ್ ಸುದ್ದಿ; ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು, ಮಾರಾಟ ಯಾವಾಗ?


ಅರಣ್ಯಕ್ಕೆ ಬೆಂಕಿ ವ್ಯಾಪಿಸಿದ ಸುದ್ದಿ ತಿಳಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ: ತೊಗರಿ ಬೇಳೆ ಸೇವಿಸುವ ಮುನ್ನ ಹುಷಾರ್‌; ಬೇಳೆಯಲ್ಲೂ ಪತ್ತೆಯಾಗಿದೆ ಕ್ಯಾನ್ಸರ್‌ ಅಂಶ!; ಕೆಮಿಕಲ್ ತೊಗರಿ ಬೇಳೆ ಕಂಡು ಹಿಡಿಯೋದು ಹೇಗೆ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.