ನಾಳೆ ಕಲ್ಕಟ್ಟೆಯಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ, ಕಲ್ಕಟ್ಟೆ ಇವರ ಆಶ್ರಯದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಏಪ್ರಿಲ್ 25, 2026ರಂದು ಕಲ್ಕಟ್ಟೆಯಲ್ಲಿ ಆಯೋಜಿಸಲಾಗಿದೆ.

ಈ ಬಾರಿ ಪಂದ್ಯಾಟವು ಪ್ರೋ ಲೀಗ್ ಮಾದರಿಯಲ್ಲಿ ನಡೆಯಲಿದ್ದು, 10 ಮಾಲೀಕರನ್ನೊಳಗೊಂಡ 10 ತಂಡಗಳು ಪಾಲ್ಗೊಳ್ಳಲಿವೆ. ಶೃಂಗೇರಿ ಕ್ಷೇತ್ರದ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಪಂದ್ಯಾಟದ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳೊಂದಿಗೆ ಟ್ರೋಫಿ ನೀಡಲಾಗುತ್ತದೆ. ಪ್ರಥಮ ಸ್ಥಾನಕ್ಕೆ ₹30,000, ದ್ವಿತೀಯ ಸ್ಥಾನಕ್ಕೆ ₹20,000, ತೃತೀಯ ಸ್ಥಾನಕ್ಕೆ ₹10,000 ಹಾಗೂ ಚತುರ್ಥ ಸ್ಥಾನಕ್ಕೆ ₹5,000 ಬಹುಮಾನ ಘೋಷಿಸಲಾಗಿದೆ.

ಪಂದ್ಯಾಟದ ನೇರಪ್ರಸಾರ ‘ನ್ಯೂಸ್ ಮಲ್ನಾಡ್’ ಚಾನಲ್‌ನಲ್ಲಿ ಲೈವ್ ಪ್ರಸಾರವಾಗಲಿದೆ. ಕಬಡ್ಡಿ ಅಭಿಮಾನಿಗಳಿಗೆ ಈ ಪಂದ್ಯಾಟ ಕ್ರೀಡಾ ಹಬ್ಬದಂತಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.