ಚಿಕ್ಕಮಗಳೂರು: ವಿಚಾರಣೆಗೆ ಹಾಜರಾಗುವಂತೆ ಶಾಖಾದ್ರಿ ಮನೆಗೆ ನೋಟಿಸ್ ಅಂಟಿಸಿದ ಸಿಬ್ಬಂದಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಮಾಡಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಹುಲಿ ಉಗುರು ಬಹಳ ಸದ್ದು ಮಾಡುತ್ತಿದೆ. ಹುಲಿ ಉಗುರು ಧರಿಸಿದ ಅನೇಕ ಮಂದಿಗೆ ನೋಟಿಸ್ ಕಳುಹಿಸಿರುವ ಅರಣ್ಯ ಇಲಾಖೆ ಕೆಲವರನ್ನು ಬಂಧನ ಸಹ ಮಾಡಿದೆ. ಇದೀಗ ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿತ್ತು ಆದರೆ ಶಾಖಾದ್ರಿಯನ್ನ ಯಾಕೆ ಬಂಧನ ಮಾಡಿಲ್ಲ ಎಂದು ಹಿಂದೂಪರ ಸಂಘಟನೆ ಪ್ರಶ್ನೆ ಮಾಡಿದೆ.

 

ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿರುವ ಅರಣ್ಯ ಇಲಾಖೆ:
ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿ ಚಿಕ್ಕಮಗಳೂರು ಅರಣ್ಯ ವಲಯ ಅಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರು ಶಾಖಾದ್ರಿ ಬಂಧನ ಯಾಕಿಲ್ಲ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅರಣ್ಯ ಇಲಾಖೆಗೆ ಪ್ರಶ್ನಿಸಿದ್ದಾರೆ. ಶಾಖಾದ್ರಿಯನ್ನ ಬಂಧಿಸಿ ಪುರಾತನ ಕಾಲದಿಂದಲೂ ಇದ್ದ ಹುಲಿ ಚರ್ಮದ ಬಗ್ಗೆ ಮಾಹಿತಿ ಜೊತೆಗೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

 

ಇದನ್ನೂ ಓದಿ; ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿದ್ದಾರೆ. ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆ ಒಳಿ ಇರುವ ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

 

ಇಬ್ಬರು ಅರ್ಚಕರಿಗೂ ಷರತ್ತುಬದ್ಧ ಜಾಮೀನು:
ಹುಲಿ ಉಗುರು ಹೊಂದಿದ್ದ ಅರೋಪದಲ್ಲಿ ಇಬ್ಬರು ಅರ್ಚಕರನ್ನು ಬಂಧಿಸಿದ್ದರು. ಸದ್ಯ ಇಬ್ಬರು ಅರ್ಚಕರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಹಾಗೆಯೇ ವ್ಯಕ್ತಿಯೊಬ್ಬರು ದೂರು ನೀಡಿದ ಆಧಾರದ ಮೇರೆಗೆ ರಾಜರಾಜೇಶ್ವರಿ ನಗರದ ಬಳಿ ರಿಯಾಲಿಟಿ ಶೋ ನಡೆಯುತ್ತಿದ್ದ ಬಿಗ್ ಬಾಸ್ ಮನೆಗೆ ತೆರಳಿದ್ದ ಅರಣ್ಯಾಧಿಕಾರಿಗಳು ವರ್ತೂರ್ ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದರು. ವರ್ತೂರು ಸಂತೋಷ್ ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಸದ್ಯ ವರ್ತೂರು ಸಂತೋಷ್ ಗೆ ಕೋರ್ಟ್ ಬೇಲ್ ನೀಡಿದೆ.

ಇನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅರಣ್ಯ ರಕ್ಷಕರು, ವನ್ಯಜೀವಿ ರಕ್ಷಕರು ಎಂದು ಹೇಳಿಕೊಳ್ಳುವ ಅರಣ್ಯ ಅಧಿಕಾರಿಯೊಬ್ಬ ಹುಲಿ ಉಗುರು ಧರಿಸಿದ ಆರೋಪದ ಹಿನ್ನಲೆ ಕಳಸದ ಡಿಆರ್‌ಎಫ್‌ಓ ದರ್ಶನ್ ಎಂಬಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿತ್ತು. ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿ.ಎಫ್.ಓ ನಂದೀಶ್, ಡಿಆರ್‌ಎಫ್‌ಓ ದರ್ಶನ್ ನನ್ನು ಅಮಾನತು ಆದೇಶ ಹೊರಡಿಸಿ, ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿತ್ತು.

 

Balehonnuru: ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮೇಲೆ ಪೊಲೀಸರ ಫೈರಿಂಗ್

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೈಯ್ಯಲು ಯತ್ನಿಸಿದ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿರುವ ಘಟನೆ ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಪೂರ್ಣೇಶ್ ಎಂಬ ರೌಡಿ ಶೀಟರ್ ಮೇಲೆ ಹಲವಾರು ಕೇಸ್ ಗಳಿದ್ದು ಕೋರ್ಟ್ ಗೆ ಹಾಜರಾಗುವಂತೆ ವಾರೆಂಟ್ ಜಾರಿಮಾಡಲಾಗಿತ್ತು. ಆದರೆ ಪೂರ್ಣೇಶ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇಂದು ಬೆಳಗ್ಗೆ 6:15 ಸುಮಾರಿಗೆ ಬಾಳೆಹೊನ್ನೂರು ಪಿಎಸ್ ಐ ದಿಲೀಪ್ ಕುಮಾರ್ ಕುಮಾರ್ ನೇತೃತ್ವದಲ್ಲಿ ಬಂಧಿಸಲು ತೆರಳಿದ್ದು, ಸೆರೆಂಡರ್ ಆಗುವಂತೆ ತಿಳಿಸಿದ್ದಾರೆ. ಆದರೆ ಪೂರ್ಣೇಶ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದರೂ ಮಾತು ಕೇಳದ ಪೂರ್ಣೇಶ್ ಕಾಲಿಗೆ ಸಬ್ ಇನ್ಸ್ಪೆಕ್ಟರ್ ದಿಲೀಪ್ ಫೈರಿಂಗ್ ಮಾಡಿದ್ದಾರೆ.

ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್ ರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪೊಲೀಸರಿಂದ ಗುಂಡು ತಿಂದ ರೌಡಿ ಶೀಟರ್ ಪೂರ್ಣೇಶ್ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಂ, ಕೊಪ್ಪ ಡಿವೈ ಎಸ್ ಪಿ ಅನಿಲ್ ಮಹದಾಸ್ ಭೇಟಿ ನೀಡಿದ್ದಾರೆ.

ಪೂರ್ಣೇಶ್ ಮೇಲೆ 4 ಕೊಲೆ ಯತ್ನದ ಕೇಸ್ ಸೇರಿದಂತೆ ಒಟ್ಟು 8 ಕೇಸ್ ಗಳು ಇವೆ. ಕೋರ್ಟ್ ಗೆ ಹಾಜರಾಗುವಂತೆ ವಾರೆಂಟ್ ಜಾರಿ ಮಾಡಲಾಗಿತ್ತು ಆದ್ರೆ ಪೂರ್ಣೇಶ್ ದೊಡ್ಡ ಮರಗಳ ಮೇಲೆ, ಕಾಡು, ಕಾಫಿತೋಟದಲ್ಲಿ ಅಡಗಿ ಕುಳಿತಿರುತ್ತಿದ್ದ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.