ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಒಂದೇ ಕುಟುಂಬಕ್ಕೆ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ ಲೈಟ್ ಫೌಂಡೇಶನ್ ಆಯೋಜಿಸಿದ ನೃತ್ಯ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ʼಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ ಲೈಟ್ ಫೌಂಡೇಶನ್ (ರಿ)ಸಂಸ್ಥಾಪಕಿ ಡಾ. ಅಂಬಿಕಾ ಸಿ ಇವರು ಆಯೋಜಿಸಿದ್ದ ನೃತ್ಯ ವಿಶ್ವ ದಾಖಲೆ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಜಾನ್ನಾಪುರ ಗ್ರಾಮದ ಮುರ್ಗೆಶ್ ಅವರ ಪತ್ನಿ ಅನ್ನಪೂರ್ಣ ಹಾಗೂ ಮುರ್ಗೆಶ್ ಮತ್ತು ಅನ್ನಪೂರ್ಣರವರ ಮಗಳು ಮಾನ್ಯ ಜೆ. ಮ್ ಹಾಗೂ ಮಗ ಮಧು ಜೆ ಮ್ ಅವರು ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದರಲ್ಲಿ ಭಾಗವಹಿಸಿ ವಿಶ್ವ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಪೋಷಕರ ಗಮನಕ್ಕೆ; ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ!; ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
ಇದರಿಂದ ಒಂದೇ ಕುಟುಂಬದ ಮೂವರು ಬುಕ್ ಆಫ್ ವರ್ಲ್ಡ್ ರೆಕಾರ್ಡ್ʼಗೆ ಸೇರ್ಪಡೆಯಾದಂತಾಗಿದೆ.
ಇದನ್ನೂ ಓದಿ: PM ಕಿಸಾನ್ ಯೋಜನೆಯ 19 ನೇ ಕಂತಿನ ಹಣ ಬಿಡುಗಡೆ!; ಹಣ ಬಾರದೇ ಇದ್ರೆ ಈ ರೀತಿ ಮಾಡಿ












