ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಶಿಕಾರಿಗೆ ಹೋಗಿದ್ದ ವೇಳೆ ಮಿಸ್ ಫೈರಿಂಗ್ ಆಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ನಡೆದಿದೆ. ಗೌತಮ್ (25) ಮಿಸ್ ಫೈರಿಂಗ್ ಮೃತಪಟ್ಟ ಯುವಕ.
ಇದನ್ನೂ ಓದಿ: £19,800 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ

ಬಸವಾನಿ ಸಮೀಪದ ಕೊಳಾವರ ಗ್ರಾಮದ ಯುವಕ ಸ್ನೇಹಿತರ ಜೊತೆ ಶಿಕಾರಿಗೆ ಹೋಗಿದ್ದು, ಈ ವೇಳೆ ಮಿಸ್ ಫೈರ್ ಆಗಿ ಗುಂಡು ಗೌತಮ್ ಗೆ ತಗುಲಿದೆ. ಪರಿಣಾಮ ಸ್ಥಳದಲ್ಲೆ ಸಾವನಪ್ಪಿದ್ದಾನೆ.

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: £2,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?















